




ಕಕ್ಯಪದವು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಸಂಸ್ಥೆ, ದಕ್ಷಿಣ ಕನ್ನಡ ಮಂಗಳೂರು ಉಪನಿರ್ದೇಶಕರ ಕಛೇರಿ ಮತ್ತು ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುರತ್ಕಲ್ ಅವರ ಸಹಯೋಗದಲ್ಲಿ ಅ.13ರಂದು ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ 14 ರ ವಯೋಮಾನದ ಪ್ರಾಥಮಿಕ ಹಾಗೂ 17 ರ ವಯೋಮಾನದ ಪ್ರೌಢ ವಿಭಾಗದ ಬಾಲಕ – ಬಾಲಕಿಯರ ತಂಡವು ಬಂಟ್ವಾಳ ತಾಲೂಕು ಮಟ್ಟವನ್ನು ಪ್ರತಿನಿಧಿಸಿ, ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ, ಪ್ರಾಥಮಿಕ ವಿಭಾಗದ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.


ವಿದ್ಯಾಸಂಸ್ಥೆಯ ಹೆಮ್ಮೆಯ ಕ್ರೀಡಾಪಟುಗಳಾದ ಅಧೀಶ್ ಎಸ್ .ಪಿ. ಹಾಗೂ ಅಬ್ದುಲ್ ರಾಹಿದ್ ರೆಹಮಾನ್ ಅವರು, ಮೈಸೂರು ವಿಭಾಗೀಯ ಮಟ್ಟದ ಥ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ಅಧೀಶ್ ಎಸ್.ಪಿ. ಅವರು ಸವ್ಯ ಸಾಚಿ ಆಟಗಾರ ಪ್ರಶಸ್ತಿಯನ್ನೂ ಪಡೆದಿರುತ್ತಾರೆ.
ಈ ಪಂದ್ಯಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಎಲ್ಲಾ ಕ್ರೀಡಾಪಟುಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದರು. ಸಂಸ್ಥೆಯ ದೈಹಿಕ ಶಿಕ್ಷಕಿ ಹರಿಣಾಕ್ಷಿ ಜಿ.ಕೆ. ಮತ್ತು ಶ್ರದ್ಧಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುತ್ತಾರೆ.









