




ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕ ಹಬ್ಬವು ಡಿ. 3ರಂದು ನಡೆಯಿತು. ನ. 30ರಂದು ಪವಿತ್ರ ಹೃದಯ ಯೇಸು ಕ್ರಿಸ್ತರ ಸರ್ವಾಜನಿಕ ಮೆರವಣಿಗೆ ಮೂಲಕ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಡಿ2ರಂದು ದೇವರಿಗೆ ಕೃತಜ್ಞತಾ ದಿವ್ಯ ಬಲಿ ಪೂಜೆ ಅರ್ಪಿಸಲಾಯಿತು.





ಹಬ್ಬದ ಪ್ರಧಾನ ಬಲಿ ಪೂಜೆಯನ್ನು ಫಾ. ನವೀನ್ ಪಿಂಟೊ ಅರ್ಪಿಸಿದರು. ಸೇಕ್ರೆಡ್ ಹಾರ್ಟ್ ಚರ್ಚ್ ನ ಪ್ರಧಾನ ಧರ್ಮ ಗುರು ಫಾ. ಸ್ಟಾನಿ ವೇಗಸ್, ಫಾ. ಲೇರಿ ಪಿಂಟೊ ಹಾಗೂ ಬೆಳ್ತಂಗಡಿ ವಲಯದ 25ಕ್ಕೂ ಹೆಚ್ಚು ಧರ್ಮಗುರುಗಳು ಭಾಗವಹಿಸಿದ್ದರು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಆರ್ಥಿಕ ಮಂಡಳಿ ಸದಸ್ಯರು ಸಹಕರಿಸಿದರು.









