ಪುಂಜಾಲಕಟ್ಟೆ: ಅಶಕ್ತರಿಗೆ ನ್ಯಾಯ ಒದಗಿಸಿ, ಶಕ್ತಿ ತುಂಬುವ ಕಾರ್ಯವನ್ನು ರಾಜಕಾರಣಿಗಳು ಮಾಡಬೇಕು. ತುಂಗಪ್ಪ ಬಂಗೇರರು ಸಾಮಾಜಿಕ ಕಳಕಳಿವುಳ್ಳ ನೇತಾರರಾದ ಅವರು ಯುವ ರಾಜಕಾರಣಿಗಳಿಗೆ ಪ್ರೇರಣೆ. ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಹೋರಾಟ ನಡೆಸಿ, ಸಮಸ್ಯೆಗಳಿಗೆ ಸ್ಪಂದಿಸುವ ಜನ ನಾಯಕ ಯಂ.ತುಂಗಪ್ಪ ಬಂಗೇರ, ಸರ್ಕಾರಿ ವ್ಯವಸ್ಥೆಯಲ್ಲಿ ಜನರಿಗೆ ಪ್ರಾಮಾಣಿಕವಾಗಿ ಉತ್ತರ ಒದಗಿಸಲು ಬಂಗೇರ ಪ್ರಯತ್ನ ಅವಿಸ್ಮರಣೀಯ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.

ಅವರು ಸ್ವಸ್ತಿಕ್ ಫ್ರೆಂಡ್ಸ್ ಪುಂಜಾಲಕಟ್ಟೆ, ಎಂ.ತುಂಗಪ್ಪ ಬಂಗೇರ ಹಾಗೂ ಕಕ್ಯಪದವು ಕಮಲ ನಿವಾಸ ಮುಂಬೈ ಉದ್ಯಮಿ ನಾರಾಯಣ ಸಾರಥ್ಯದಲ್ಲಿ 17ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಸಾಧಕರಿಗೆ ಸ್ವಸ್ತಿಕ್ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾ.16ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ ನಾನು ಸಾಮೂಹಿಕ ಕಾರ್ಯಕ್ರಮಕ್ಕೆ 13 ವರ್ಷಗಳಿಂದ ಬರುತ್ತಿದ್ದೇನೆ. ಸಾಮೂಹಿಕ ವಿವಾಹ ನಿರಂತರವಾಗಿ ನಡೆಯುತ್ತಾ ಇರಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಾಸಕ ಹರೀಶ್ ಪೂಂಜ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಾಪಕಾಧ್ಯಕ್ಷ, ಜಿ.ಪಂ. ಮಾಜಿ. ಉಪಾಧ್ಯಕ್ಷ ಯಂ.ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ, ಮಂಗಳೂರು ಅಂದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಖ್ಯಾತ ಜ್ಯೋತಿಷ್ಯ ಅನಿಲ್ ಪಂಡಿತ್, ಕರ್ಕೇರ ಮೆಷಿನ್ ಟೂಲ್ಸ್ ಮಾಲಕ ಸುರೇಶ್ ಕರ್ಕೇರ, ಸಿದ್ಧಕಟ್ಟೆ ಪ್ಯಾಕ್ಸ್ ಅಧ್ಯಕ್ಷ ಪ್ರಭಾಕರ ಪ್ರಭು, ಬಂಟ್ವಾಳ ಪ್ಯಾಕ್ಸ್ ಅಧ್ಯಕ್ಷ ಕುರುಣೇಂದ್ರ ಕೊಂಬರಬೈಲು, ವಾಮದಪದವು ಪ್ಯಾಕ್ಸ್ ಅಧ್ಯಕ್ಷ ಸಂಜೀವ ಪೂಜಾರಿ, ಬಂಟ್ವಾಳ ತಾಲೂಕು ಬಿಜಿಪಿ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ, ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರವಿಶಂಕರ್ ಹೊಳ್ಳ, ಗುತ್ತಿಗೆದಾರ ಮೋಹನ್ ಶೆಟ್ಟಿ ನಲ್ವಲ್ದಡ್ಕ, ಬಡಗಕಜೆಕಾರು ಪ್ಯಾಕ್ಸ್ ಅಧ್ಯಕ್ಷ ಸತೀಶ್ ಪೂಜಾರಿ , ವಕೀಲ ಅನೀಲ್ ಕುಮಾರ್ ಸಹಿತ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದ ಮೂರ್ತಿ ಶ್ರೀಕೃಷ್ಣ ಭಟ್ ಕಾರ್ಕಳ ಮತ್ತು ಅರ್ಚಕ ವೃಂದದವರು ವೈಧಿಕ ವಿಧಾನ ನೇರವೇರಿಸಿದರು. ಒಟ್ಟು 7 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ನವ ಜೀವನಕ್ಕೆ ಕಾಲಿಟ್ಟರು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ, ಸ್ವಸ್ತಿಕ ಪ್ರಶಸ್ತಿ: ಉದ್ಯಮಿ ಹರೀಶ್ ಪೂಜಾರಿ, ಸಮಾಜ ಸೇವಕ ಅಬ್ದುಲ್ ಕುಂಞ, ಯಕ್ಷಗಾನ ಕ್ಷೇತ್ರ ಸಾಯಿ ಸುಮಾ ನಾವಡ, ಶಿಲ್ಪಿ ಶಶಿಧರ ಆಚಾರ್ಯ, ಧಾರ್ಮಿಕ ಕ್ಷೇತ್ರ ಸಂದೇಶ್ ಮದ್ದಡ್ಕ ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಐ.ಬಿ ಸಂದೀಪ್ ಕುಮಾರ್ ಜೈನ್ ಮತ್ತು ಹರೀಶ್ ಮಾಂಬಾಡಿ , ಸಮಾಜ ಸೇವೆ ರಮೇಶ್ , ಕುಸ್ತಿಯಲ್ಲಿ ಚಂದ್ರಹಾಸ ಕಡೆಗೋಳಿ , ಅಂಕಣಗಾರ ಆದರ್ಶ ಶೆಟ್ಟಿ, ರಂಗಭೂಮಿ ಡಿ.ಎಸ್.ಬೋಳುರು, ಸಮಾಜ ಸೇವೆ ರಮೇಶ್ ಶೆಟ್ಟಿ ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಕಕ್ಯಪದವು ಕಮಲ ನಿವಾಸ, ಮುಂಬೈ ಉದ್ಯಮಿ ನಾರಾಯಣ ಶೆಟ್ಟಿ, ಕ್ಲಬ್ ಮಹಾ ಪೋಷಕ ಸಂತೋಷ್ ಕುಮಾರ್ ಜೆ.ಪಿ., ಮುಂಬೈ ಉದ್ಯಮಿ ಸುಂದರ್ ರಾಜ್ ಹೆಗ್ಡೆ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಉದ್ಯಮಿ ಜಯಚಂದ್ರ ಬೊಳ್ಮಾರ್ ವಾಮದಪದವು,ಗೌರವಾಧ್ಯಕ್ಷ ಅಬ್ದುಲ್ಲ ಪಿ, ಸಂಚಾಲಕ ರಾಜೇಶ್ ಪಿ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ , ಬೆಳ್ತಂಗಡಿ ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬಡಗಕಜೆಕಾರು ಗ್ರಾ.ಪಂ.ಅಧ್ಯಕ್ಷ ದೇವಾದಸ್ ಕಜೆಕಾರ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.
ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಭಾಕರ್ ಸ್ವಾಗತಿಸಿ, ಹೆಚ್. ಕೆ. ನಾಯನಾಡು ನಿರೂಪಿಸಿದರು. ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲಾ ವಿದ್ಯಾರ್ಥಿಗಳಿಂದ ಯಕ್ಷ ನೃತ್ಯ ಸಾಂಸ್ಕೃತಿಕ ವೈಭವ ಪ್ರದರ್ಶನ, ರಾತ್ರಿ ಪಂಡ್ ದ್ ಸುಖ ಇಜ್ಜಿ ಎಂಬ ತುಳು ನಾಟಕ ನಡೆಯಲಿದೆ.