ಬೆಳ್ತಂಗಡಿ: ಯುವವಾಹಿನಿ ಘಟಕದ ಆಶ್ರಯದಲ್ಲಿ, ಶ್ರೀ ಸ್ಟಾರ್ ಯುವಕ ಮಂಡಲ, ಮಹಿಳಾ ಮಂಡಲ ಪಣೆಜಾಲು, ಬೆಳ್ತಂಗಡಿ ಧ್ವನಿ ನ್ಯೂಸ್ ಹಾಗೂ ಓಡಿಲ್ನಾಳ ಯುವವಾಹಿನಿ ಸಂಚಾಲನ ಸಮಿತಿ ಇವುಗಳ ಸಹಯೋಗದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ 7ನೇ ವರ್ಷದ ತುಳುನಾಡ ತುಡರ ಪರ್ಬ ಸಾಮೂಹಿಕ ದೀಪಾವಳಿ ಆಚರಣೆ ಕಾರ್ಯಕ್ರಮ ಅ. 20ರಂದು ಸಂಜೆ ಆರಂಭಗೊಳ್ಳಲಿದೆ.
ವಿಶೇಷವಾಗಿ ಈ ವರ್ಷ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ ನಡೆಯಲಿದೆ, ಸಂಜೆ ಆರರಿಂದ 1001 ಹಣತೆ ಬೆಳಗುವುದರೊಂದಿಗೆ ಗೋಪೂಜೆ, ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದ್ದು, ಗುರುವಾಯನಕೆರೆ NET ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಸಜಿ ಪಿ.ಆರ್., ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಯುವ ವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆಬಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಪಣೆಜಾಲು ಶ್ರೀ ಸ್ಟಾರ್ ಶಟಲ್ ಪೌಂಡೇಶನ್ ನ ಅಧ್ಯಕ್ಷ ಯತೀಶ್ ಸಿರಿಮಜಲು, ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಅಧ್ಯಕ್ಷ ನಾಗೇಶ್ ಪೂಜಾರಿ ಆದೇಲು ಭಾಗವಹಿಸಲಿದ್ದಾರೆ.
ಕಳೆದ ಏಳು ವರ್ಷಗಳಿಂದ ಬಹಳ ವಿನೂತನವಾಗಿ ದೀಪಾವಳಿ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುತ್ತಿದೆ ಎಂದು ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.