ಬೆಳ್ತಂಗಡಿ: ಬೆಂಗಳೂರು ಕನ್ನಡ ಸಾಂಸ್ಕೃತಿಕ ಸಂಘ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ ಪ್ರಕಟಿಸುವ ಕಣಾದ ಕನ್ನಡ ವಾರ್ಷಿಕ ವಿಜ್ಞಾನ ಪತ್ರಿಕೆಯ 51ನೇ ಸಂಚಿಕೆಯ ಪ್ರಕಟಣೆಯ ಸಂದರ್ಭದಲ್ಲಿ ರಾಜ್ಯದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಇಂದುಮತಿ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪರಮಾಣು ಶಕ್ತಿ: ಉಜ್ವಲ ಭವಿಷ್ಯವೋ ಅಥವಾ ಅಪಾಯಕಾರಿ ಜೂಜಾಟವೋ ಎಂಬ ವಿಷಯದಲ್ಲಿ ಈ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇವರು ಬೆಳಾಲು ಗ್ರಾಮದ ಮಾರ್ಪಲು ಭವಾನಿ ಮತ್ತು ದಿನೇಶ್ ದಂಪತಿಯ ಪುತ್ರಿ.