ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಕಾಯರ್ತಡ್ಕ ದೇವಕಿ ಅವರಿಗೆ ಆನಾರೋಗ್ಯದಿಂದ ನಡೆಯಲು ಅಸಾಧ್ಯವಾಗಿದ್ದು, ವೀಲ್ ಚೆಯರ್ ನ್ನು ವಿತರಿಸಲಾಯಿತು.
ಬೆಳ್ತಂಗಡಿ ಪ್ರಖಂಡ ತತ್ಸಂಘ ಪ್ರಮುಖ್ ಅಶೋಕ್ ಕಾಯರ್ತಡ್ಕ, ಕಳೆಂಜ ಒಕ್ಕೂಟದ ಅಧ್ಯಕ್ಷ ಧರ್ಣಪ್ಪ ಕುಂಬಾರ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಕಾಯರ್ತಡ್ಕ, ಮೇಲ್ವಿಚಾರಕ ರವೀಂದ್ರ ಬಿ. ಹಾಗೂ ಸೇವಾಪ್ರತಿನಿಧಿ ಜನಾರ್ದನ ಉಪಸ್ಥಿತರಿದ್ದರು.