
ಉಜಿರೆ: ಬಿಹಾರದ ಪಾಟ್ನಾದಲ್ಲಿ ಮಾ. 10 ರಿಂದ 12 ರ ವರೆಗೆ 20ನೇ ರಾಷ್ಟ್ರೀಯ ಯೂತ್ ಅಥ್ಲೆಟಿಕ್ ಕ್ರೀಡಾಕೂಟವು ನಡೆಯುತ್ತಿದ್ದು, ಈ ಕ್ರೀಡಾಕೂಟದಲ್ಲಿ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಪನ ಶಾಟ್ ಪುಟ್ ಮತ್ತು ಜಾವಲಿನ್ ಥ್ರೋ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಅಥ್ಲೆಟಿಕ್ಸ್ ತರಬೇತಿಯನ್ನು ತರಬೇತುದಾರರಾದ ಸಂದೇಶ ಪೂಂಜ ಹಾಗೂ ರಮೇಶ್ ಹೆಚ್ ನೀಡಿರುತ್ತಾರೆ.
ಇವರ ಸಾಧನೆಗೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು , ಪ್ರಾಂಶುಪಾಲರು , ಕ್ರೀಡಾ ಸಂಘದ ಕಾರ್ಯದರ್ಶಿ, ತರಬೇತುದಾರರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಕ್ರೀಡಾಪಟುಗಳು ಶುಭ ಹಾರೈಸಿರುತ್ತಾರೆ.