
ಬೆಳ್ತಂಗಡಿ: ಜೆ ಸಿ ಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಮಾ. 9 ರಂದು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ (ರಿ ) ಶಿಬರಾಜೆ ಪಾದೆ, ವೇದಿಕೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ವೃತ್ತಿ ಕೌಶಲ್ಯ ತರಬೇತಿ ಆಯೋಜಿಸಲಾಯಿತು. ಈ ತರಬೇತಿಯಲ್ಲಿ ಹೂ ಗುಚ್ಚ ತರಬೇತಿಯನ್ನು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸುಖಲತಾ ರೈ ಅವರು ಮನೆಯಲ್ಲಿರುವ ಹೂ ಉಪಯೋಗಿಸಿ ಹೇಗೆ ಗುಚ್ಚ ತಯಾರಿಸುವುದು ಎಂದು ವಿವರವಾಗಿ ತಿಳಿಸಿದರು.
ಮುಖ್ಯ ಅತಿಥಿಗಳ ಪರಿಚಯವನ್ನು ಜೆ ಸಿ ಸಂತೋಷ್ ಜೈನ್ ವಾಚಿಸಿದರು. ಈ ಸಂದರ್ಭದಲ್ಲಿ ತರಬೇತುದಾರರಾದ ಸ್ವಾತಿ ಬಿ ಶೆಟ್ಟಿ, ಆಶಾಕಾರ್ಯಕರ್ತೆಯಾದ ಮೀನಾಕ್ಷಿ, ಘಟಕದ ಮಾರ್ಗದರ್ಶಕರಗಿರುವ HGF ಜೋಸೆಫ್ ಪಿರೇರಾ, ಮತ್ತು ಘಟಕದ ಮಾಧ್ಯಮ ಸಂಯೋಜಕರಾದ ಅಕ್ಷತ್ ರೈ ,
ಜೆ ಸಿ ಯೋಜನಾ ನಿರ್ದೇಶಕರಾದ ಪ್ರಿಯಾ ಜೆ ಅಮೀನ್,ಜೆ ಸಿ ಧನುಷ್ ಜೈನ್, ಜೆ ಸಿ ಕವಿತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಮಹಿಳೆಯರು, ಸದಸ್ಯರು, ಮತ್ತು ಸ್ಥಳೀಯ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. HGF ಜೇಸಿಂತಾ ಡಿಸೋಜಾ ಅನಿಸಿಕೆ ವ್ಯಕ್ತಪಡಿಸಿದರು
ಜೆಸಿ ಸೆನ್ . ಜಿತೇಶ್ ಪಿರೇರಾ ಕಾರ್ಯಕ್ರಮ ನಿರೂಪಿಸಿ, ಜೆಸಿ ಡಾ. ಶೋಭಾ ಪಿ ಸ್ವಾಗತಿಸಿ ಜೆಸಿಎಲ್ ಟಿ ದಕ್ಷ ಜೈನ್ ಜೇಸಿವಾಣಿ ವಾಚಿಸಿದರು. JC ಚಂದನ ಪಿ ಧನ್ಯವಾದವಿತ್ತರು.