ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾನಸಿಕ ಒತ್ತಡ ನಿವಾರಣೆ ತರಬೇತಿ

0

ಬೆಳ್ತಂಗಡಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಮಾ. 9 ರಂದು ಗ್ರಾಮಭ್ಯೋದಯ ಕಾರ್ಯಕ್ರಮ ಅನುಷ್ಠಾನ ಸಮಿತಿ (ರಿ ) ಶಿಬರಾಜೆ ಪಾದೆ, ವೇದಿಕೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾನಸಿಕ ಒತ್ತಡ ನಿವಾರಣೆ ಕುರಿತು ತರಬೇತಿಯನ್ನು ನೀಡಲಾಯಿತು.

ತರಬೇತುದಾರರಾದ ಸ್ವಾತಿ ಬಿ ಶೆಟ್ಟಿ, ಮಾನಸಿಕ ಒತ್ತಡ ನಿವಾರಣೆಯ ತರಬೇತಿಯನ್ನು ನೀಡಿ ಕೆಲವು ಯೋಗವನ್ನು ಪ್ರಾಯೋಗಿಕವಾಗಿ ಸಭಿಕರಿಗೆ ಹೇಳಿಕೊಟ್ಟರು. ತರಬೇತುದಾರರನ್ನು ಜೆ ಸಿ ಧನುಷ್ ಜೈನ್ ಸಭೆಗೆ ಪರಿಚಯಿಸಿದರು.

ಆಶಾಕಾರ್ಯಕರ್ತೆಯಾದ ಮೀನಾಕ್ಷಿ, ಘಟಕದ ಮಾರ್ಗದರ್ಶಕರಗಿರುವ HGF ಜೋಸೆಫ್ ಪಿರೇರಾ ಮತ್ತು ಘಟಕದ ಮಾಧ್ಯಮ ಸಂಯೋಜಕರಾದ JC ಅಕ್ಷತ್ ರೈ, ಯೋಜನಾ ನಿರ್ದೇಶಕರಾದ ಪ್ರಿಯಾ ಜೆ ಅಮೀನ್,JC ಧನುಷ್ ಜೈನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಈ ಸಂದರ್ಭದಲ್ಲಿ, ಹಲವಾರು ಮಹಿಳಾ ಮುಖಂಡರು, ಭಾಗವಹಿಸಿದ ಸದಸ್ಯರು, ಮತ್ತು ಸ್ಥಳೀಯ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. HGF ಜೇಸಿಂತಾ ಡಿಸೋಜಾ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಜೆಸಿ ಸೆನ್ ಜಿತೇಶ್ ಪಿರೇರಾ ಕಾರ್ಯಕ್ರಮವನ್ನು ನಿರೂಪಿಸಿ, ಜೆಸಿ ಡಾ. ಶೋಭಾ ಪಿ ಸ್ವಾಗತಿಸಿ ಜೆಸಿ ಎಲ್ ಟಿ ದಕ್ಷ ಜೈನ್ ಜೇಸಿವಾಣಿ ವಾಚಿಸಿದರು. ಜೆಸಿ ಚಂದನ ಪಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here