ತಣ್ಣೀರುಪಂತ: ಸಂಜೀವಿನಿ ಮಹಾಸಭೆ ಮತ್ತು ಮಹಿಳಾ ಗ್ರಾಮಸಭೆ

0

ಬೆಳ್ತಂಗಡಿ: ಮಾ. 06 ರಂದು ಸುಗಮ ಸಂಜೀವಿನಿ ಮಹಿಳಾ ಒಕ್ಕೂಟ (ರಿ) ಹಾಗೂ ತಣ್ಣೀರುಪಂತ ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ಸಂಜೀವಿನಿ ಮಹಾಸಭೆ ಮತ್ತು ಮಹಿಳಾ ಗ್ರಾಮಸಭೆಯನ್ನು ಗ್ರಾಮ ಪಂಚಾಯತ್ ವಠಾರದ ರೈತ ಸಭಾ ಭವನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಪಂಚಾಯತ್ ಹಾಗೂ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು,ಪಂಚಾಯತ್ ಕಾರ್ಯದರ್ಶಿ ಮತ್ತು ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದರು. ಸರಿತಾ ಮತ್ತು ಸೌಮ್ಯ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಪಂಚಾಯತ್ ಅಧ್ಯಕ್ಷರಾದ ಹೇಮಾವತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಗೆ ಅತಿಥಿಗಳನ್ನು ಕೃಷಿ ಸಖಿ ಶೋಭಾರವರ ಸ್ವಾಗತ ಭಾಷಣದೊಂದಿಗೆ ಶಾಲು ಹೊದಿಸಿ ಹೂ ಕೊಟ್ಟು ಆದರಪೂರ್ವಕವಾಗಿ ಗೌರವಿಸಿದರು.

ಮುಖ್ಯ ಬರಹಗಾರರಾದ ಸೌಮ್ಯರವರು ಒಕ್ಕೂಟದ 6 ವರ್ಷದ ವರದಿ ಹಾಗೂ ಜಮಾ ಖರ್ಚಿನ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು. ಪಂಚಾಯತ್ ನ ಅಧ್ಯಕ್ಷರಾದ ಹೇಮಾವತಿ ಮತ್ತು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಜಯಾನಂದ ಕಲ್ಲಾಪು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಮಹಾಸಭೆಯ ಉದ್ದೇಶ , ಜವಾಬ್ದಾರಿ ಹಾಗೂ ಸಂಜೀವಿನಿ ಯೋಜನೆಯ ಬಗ್ಗೆ ಸಂಜೀವಿನಿ ಹಾಡಿನ ಮೂಲಕ ಬಹಳ ಸೊಗಸಾಗಿ ವಿವರಿಸಿದರು.

ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಗುಲಾಬಿಯವರು ಮಹಿಳಾ ಅಭಿವೃದ್ಧಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿ ಶುಭಹಾರೈಸಿದ್ದರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಲೋಲಕ್ಷಿ ಆರೋಗ್ಯದ ಬಗ್ಗೆ ಕೆಲವು ಉಪಯುಕ್ತ ಮಾಹಿತಿ ನೀಡಿದರು. ಲಕ್ಷ್ಮೀ ಸಂಜೀವಿನಿ ಸಂಘದ ಸದಸ್ಯರು ಉತ್ಪಾದಿಸಿರುವ ” ಶ್ರೀ ಲಕ್ಷ್ಮೀ ಕುಚಲಕ್ಕಿ” ಒಕ್ಕೂಟದ ಸದಸ್ಯರು ತಯಾರಿಸಿರುವ “ಸುಗಮ ಸಂಜೀವಿನಿ ಉಪ್ಪಿನಕಾಯಿ ” ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸಲು ಒಕ್ಕೂಟದ ಸದಸ್ಯರನ್ನು ಗುರುತಿಸುವ ಉದ್ದೇಶದಿಂದ ಒಕ್ಕೂಟದ ಹೊಸ ಜರ್ಸಿ(ಉಡುಪನ್ನು) ಈ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಜಯಾನಂದ ಕಲ್ಲಾಪು, ಒಕ್ಕೂಟ ದ ಅಧ್ಯಕ್ಷರಾದ ಸವಿತಾ, ವಲಯಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಇವರಿಗೆ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ನಂತರ ಶಿಕ್ಷಣ ಇಲಾಖೆಯ ಸಂಯೋಜಕರದ ರವೀಶ್ ಡಿಜಿಟಲ್ ಬಗ್ಗೆ ಮಾಹಿತಿ ನೀಡಿದರು. ಅದೇ ರೀತಿ ಉತ್ತಮ ಸಂಘವೆಂದು ಶ್ರೀಲಕ್ಷ್ಮಿ ಸಂಜೀವಿನಿ ಸಂಘವನ್ನು ಗುರುತಿಸಿ ಆ ಸಂಘದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪದಾಧಿಕಾರಿಗಳ ಆಯ್ಕೆ ಮಾಡಿ ಪದಗ್ರಹಣವನ್ನು ಮಾಡಲಾಯಿತು. ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಒಕ್ಕೂಟದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಪಂಚಾಯತ್ ಸಿಬ್ಬಂದಿಗಳಿಗೆ ಸ್ಮರಣಿಕೆ ನೀಡಿ ಗುರುತಿಸಲಾಯಿತು. ಮಹಾಸಭೆ ಹಾಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಆಟೋಟ ಸ್ವರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಒಕ್ಕೂಟ ದ ಅಧ್ಯಕ್ಷರಾದ ಸವಿತಾ ,ಮುಖ್ಯಬರಹಗಾರರು, ಎಲ್. ಸಿ. ಆರ್. ಪಿ, ಕೃಷಿಸಖಿ, ಪಶುಸಖಿ, ಕೃಷಿ ಉದ್ಯೋಗ ಸಖಿ, ಹಾಗೂ ಘನತ್ಯಾಜ್ಯ ಘಟಕದ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು ಭಾಗವಹಿಸದರು. ಧರಿತ್ರಿ ಇವರು ಅದ್ಭುವಾದ ನೃತ್ಯದ ಮೂಲಕ ನೆರೆದಿರುವವರನ್ನು ಮನರಂಜಿಸಿದರು. ಮುಖ್ಯ ಬರಹಗಾರರು ನಿರೂಪಣೆ ಮಾಡಿ ಪಶುಸಖಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here