ಬೆಳಾಲು: ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 10 ರಿಂದ 14ರವರೆಗೆ ಪದ್ನಾಭಾ ತಂತ್ರಿ ಗಳ ನೇತೃತ್ವದಲ್ಲಿ ನಡೆಯಲಿದ್ದು, ಮಾ. 10 ರಂದು ಸಂಜೆ ತಂತ್ರಿ ವರ್ಯರ ಸ್ವಾಗತ, ದೇವಸ್ಥಾನ ದಲ್ಲಿ ತೋರಣ, ಧ್ವಜಾರೋಹಣ ಮೂಲಕ ಪ್ರಾರಂಭ ಗೊಂಡಿತು. ಬಳಿಕ ಉಗ್ರಾಣತುಂಬಿ, ಮಹಾಪೂಜೆ, ಬಲಿ ಉತ್ಸವ ನಡೆಯಿತು. ಬೆಳಿಗ್ಗೆ ಊರ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ, ಬಾಲೆ ಮೊಟ್ಟಿಕಲ್ಲು ಪಾದ ಪೂಜೆ, ಮಹಾ ಪೂಜೆ ನಡೆಯಿತು. ಸಾಂಸ್ಕೃಕ ಕಾರ್ಯಕ್ರಮದ ಅಂಗವಾಗಿ ಸಂಜೆ ಭಜನೆ, ಸ್ಥಳೀಯ ಅಂಗನವಾಡಿ ಮಕ್ಕಳಿಂದ, ನೃತ್ಯ ವೈವಿದ್ಯ, ಮಾಯ ಫ್ರೆಂಡ್ಸ್ ಪ್ರಯೋಜಕತ್ವದಲ್ಲಿ ಮಾಯ ಮಹಾದೇವ ಕಲಾ ತಂಡದವರಿಂದ ಮಾಸ್ಟ್ರು ಮಣಿಪುಜೆರ್ ನಾಟಕ ಪ್ರದರ್ಶನ ಗೊಂಡಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡ,ಆನುವಂಶಿಕ ಮೋಕ್ತೆ ಸರ ಪುಷ್ಪದಂತ ಜೈನ್ ಮಾಯಗುತ್ತು, ಅಸ್ರಣ್ಣ ಗಣೇಶ್ ಬಾರಿತ್ತಯ, ಪವಿತ್ಪಾಣಿ ಮೋಹನ್ ಕೆರ್ಮಣ್ಣಯ, ಅರ್ಚಕ ಕೇಶವ ರಾಮಾಯಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಗಳಾದ ಸುರೇಶ್ ಭಟ್ ಪರಂಗಜೆ, ರಾಜಪ್ಪ ಗೌಡ ಪುಚ್ಚಹಿತ್ಲು, ದಾಮೋದರ ಗೌಡ ಸುರುಳಿ, ದಯಾನಂದ ಪಿ ಬೆಳಾಲು, ದಿನೇಶ್ ಎಂ. ಕೆ, ವಾರಿಜ ಗುಂಡ್ಯ, ಕವಿತಾ ಉಮೇಶ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿ ಮಾರು, ಮಾಯ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ ಮತ್ತು ಸದಸ್ಯರು, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಕೃಷ್ಣ ಮತ್ತು ಸದಸ್ಯರು, ವರಮಹಾ ಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಲಲಿತ ಮೋನಪ್ಪ ಗೌಡ ಮತ್ತು ಸದಸ್ಯರು, ವಿಲಯ ದವರು, ಸಿಬ್ಬಂದಿ ವರ್ಗ, ಊರವರು ಉಪಸ್ಥಿತರಿದ್ದು ಸಹಕರಿಸಿದರು.
ಮಾ. 11ರಂದು ಸಂಜೆ ದುರ್ಗಾ ಪೂಜೆ, ರಾತ್ರಿ ಬಲಿ ಉತ್ಸವ, ಭಜನೆ, ರಾತ್ರಿ ನೃತ್ಯ ವೈವಿದ್ಯ, ಭಕ್ತಿ ರಸಮಂಜರಿ, ತಲಕಳ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ. 12 ರಂದು ಬೆಳಿಗ್ಗೆ ಸೂಡರ ಬಲಿ ಉತ್ಸವ, ಭಜನೆ,ಸಂಜೆ ನೃತ್ಯ ವೈವಿದ್ಯ, ಶಶಿಪ್ರಭಾ ಪರಿಣಯ, ನೃತ್ಯ ರಾತ್ರಿ ಚಂದ್ರ ಮಂಡಲ ಉತ್ಸವ, ವಸಂತ ಕಟ್ಟೆ ಪೂಜೆ ಬಳಿಕ ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ” ಕಾಶಿತೀರ್ಥ” ನಾಟಕ ನಡೆಯಲಿದೆ.
ಮಾ. 13 ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮದ್ಯಾಹ್ನ ಮಹಾಪೂಜೆ, ಸಂಜೆ ಮಾಯ ಗುತ್ತು ಮನೆಯಿಂದ ದೈವಗಳ ಭಂಡಾರ ಆಗಮನ, ಭಕ್ತಿ ಗಾನ ಸುಧೆ, ರಾತ್ರಿ ರಥೋತ್ಸವ, ಭೂತಬಲಿ,
ಶಯನೋತ್ಸವ, ಮಾ. 14ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಮಹಾ ಪೂಜೆ, ಸಂಜೆ ಅವಭ್ರತ, ಧ್ವಜಾವರೋಹಣ ನಿತ್ಯ ಪೂಜೆ, ರಂಗ ಪೂಜೆ, ನಂತರ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.