p>
ಬೆಳ್ತಂಗಡಿ: ಶಿಕ್ಷಕಿಯಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತಗೊಂಡಿರುವ ಶಿಕ್ಷಕಿ ನೇನ್ಸಿ ಮೇಬಲ್ ಮೆಂಡೋನ್ಸ(74ವ ) ಡಿ. 22 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ತನ್ನ ನಿಧನದ ನಂತರ ದೇಹವನ್ನು ಮೆಡಿಕಲ್ ಕಾಲೇಜ್ ಗೆ ದಾನ ಮಾಡಬೇಕೆಂಬ ಬಯಕೆಯಂತೆ ಮಗ ಪ್ರವೀಣ್ ಪಾಯಸ್ ದೇಹವನ್ನು ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಗೆ ದಾನ ನೀಡಲು ನಿರ್ಧರಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ನಾಳೆ ಬೆಳಿಗ್ಗೆ 9 ಗಂಟೆಗೆ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆದು ಬಳಿಕ ಬೆಳ್ತಂಗಡಿ ಚರ್ಚ್ ನಲ್ಲಿ ವಿಧಿ ವಿಧಾನದ ಪ್ರಕ್ರಿಯೆ ನಡೆದ ಬಳಿಕ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಗೆ ಮೃತ ದೇಹವನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಮೃತರ ಪತಿ ಜೇರ್ನಿ ಪಾಯಸ್ ದಿವಂಗತರಾಗಿದ್ದು ಭಾರತೀಯ ಸೇನೆಯಲ್ಲಿ ಅಮೋಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಮೃತರು ಕುಟುಂಬ ವರ್ಗ, ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದ, ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ.
p>