ಬೆಳ್ತಂಗಡಿ: ಜಮೀಯ್ಯತುಲ್ ಫಲಾಹ್ ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಘಟಕದ ಅಧ್ಯಕ್ಷರಾದ ಹಾಜಿ ಬಿ ಸೇಕುಂಞಯವರ ಅಧ್ಯಕ್ಷತೆಯಲ್ಲಿ ನ. 2ರಂದು ಘಟಕದ ಸಭಾಂಗಣದಲ್ಲಿ ಜರಗಿತು.
ಘಟಕದ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಖುರ್ ಆನ್ ಪಾರಾಯಣ ಪಠಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಘಟಕದ ಜಿಲ್ಲಾ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ ಕೆ ಮಾತನಾಡಿ ಜಂಯೀಯತುಲ್ ಫಲಾಹ್ ಸಂಸ್ಥೆಯು ಹಲವಾರು ವರ್ಷಗಳಿಂದಲೂ ಶಿಕ್ಷಣಕ್ಕಾಗಿ ತಮ್ಮಿಂದಾದ ಸಹಾಯ ನೀಡುತ್ತಿದ್ದು, ವಿಧ್ಯಾರ್ಥಿಗಳು ಇದರ ಸದುಪಯೋಗ ಪಡಕೊಂಡು ಉತ್ತಮ ಸಾಧನೆಯನ್ನು ಮಾಡಬೇಕು ಎಂದರು. ನಾನು ಶಿಕ್ಷಣದಲ್ಲಿ ಮುಂದುವರಿಯಲು ಜಮೀಯ್ಯತುಲ್ ಫಲಾಹ್ ವತಿಯಿಂದ ನೀಡಿದ ಸಹಕಾರವನ್ನು ನೆನಪಿಸಿಕೊಂಡರು. ಡಾ ನಿಯಾಝ್ ಪಣಕ್ಕಜೆ ಯೇನಪೋಯ ಮಂಗಳೂರು ಮಾತನಾಡಿ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದು ಎಂದು ತನ್ನ ಅನುಭವವನ್ನು ಹಂಚಿಕೊಂಡರು. ಅಥಿತಿಗಳಾದ ಹಬೀಬ್ ಸಾಹೇಬ್ ಮಂಜೊಟ್ಟಿ, ಮೊಹಮ್ಮದ್ ಕಕ್ಕಿಂಜೆ.ನಾಸಿರ್ ಖಾನ್ ಪಿಲ್ಯ ಮಾತನಾಡಿ ಶಿಕ್ಷಣ ಸಂಸ್ತೆ ನಡೆಸುವ ಸಂಸ್ಥೆಗಳಿಗೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು. ಘಟಕದ ಅಧ್ಯಕ್ಷರಾದ ಹಾಜಿ ಶೇಕುಂಞ ಮಾತನಾಡಿ ನಮ್ಮ ಸಂಸ್ತೆಯು ಘಟಕದ ಸದಸ್ಯರ ಹಾಗೂ ಕೇಂದ್ರ ಸಮಿತಿ ಮತ್ತು ದಾನಿಗಳ ಸಹಾಯದಿಂದ ವಿಧ್ಯಾರ್ಥಿ ವೇತನ ನೀಡಲಾಗುತ್ತಿದೆ ಎಲ್ಲರಿಗೂ ವಿಧ್ಯಾರ್ಥಿಗಳು ಪೋಷಕರು ದುಆ ಮಾಡಬೇಕು ಎಂದರು. ವೇದಿಕೆಯಲ್ಲಿ ಕೋಶಾಧಿಕಾರಿ ಅಬ್ಬೋನು ಮದ್ದಡ್ಕ ಸಹ ಕಾರ್ಯದರ್ಶಿ ಉಮ್ಮರ್ ಚಪ್ಪಲ್ ಮಾರ್ಟ್ ಸೇರಿದಂತೆ ಘಟಕದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಆಲಿಯಬ್ಬ ಪುಲಾಬೆಯವರು ಸ್ವಾಗತಿಸಿದರು. ಘಟಕದ ಉಪಾಧ್ಯಕ್ಷರಾದ ಖಾಲಿದ್ ಪುಲಾಬೆಯವರು ಧನ್ಯವಾದ ಸಲ್ಲಿಸಿದರು. ಹಾಜಿ ಉಮ್ಮರ್ ಕುಂಞ ನಾಡ್ಜೆ ಹಾಗೂ ಅಬೂಬಕ್ಕರ್ ಕಾರ್ಯಕ್ರಮ ನಿರೂಪಿಸಿದರು