


ಕಾಯರ್ತಡ್ಕ: ರಬ್ಬರ್ ಉತ್ಪಾದಕರ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಅ. 28ರಂದು ಸಂಘದ ಅಧ್ಯಕ್ಷ ಎನ್. ಕೆ. ಚಾಕೋ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರಬ್ಬರ್ ಮಂಡಳಿ ಮಂಗಳೂರು ವಲಯದ ಅಭಿವೃದ್ಧಿ ಅಧಿಕಾರಿ ದೀಪ್ತಿ ದಾಸ್ ಪಿ. ಮತ್ತು ಯುವ ವೃತ್ತಿ ಪರರಾದ ನವೀನ್ ಕುಮಾರ್ ಉಪಸ್ಥಿತರಿದ್ದು, ಉತ್ಪಾದಕರಿಗೆ ರಬ್ಬರ್ ಮಂಡಳಿಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು.


ಸಭೆಯಲ್ಲಿ ಕಳೆಂಜ ಪಂಚಾಯತ್ ಸದಸ್ಯ ನಿತ್ಯಾನಂದ ರೈ, ರಬ್ಬರ್ ಬೆಳೆಗಾರರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ನಿರ್ದೇಶಕರಾದ ಭೈರಪ್ಪ,ರಬ್ಬರ್ ಬೆಳೆಗಾರರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ವಿಶೇಷ ಆಹ್ವಾನಿತ ಸದಸ್ಯರಾದ ಅಬ್ರಹಾಂ ಬಿ.ಎಸ್., ಹರೀಶ್ ರಾವ್ ಕಾಯಡ ಮತ್ತು ಸಂಘದ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘವು ರಬ್ಬರ್ ಬೆಳೆಗಾರರಿಂದ ಹಾಲು ಖರೀದಿ ಮಾಡಿ ರಬ್ಬರ್ ಶೀಟ್ ಮಾಡಿ ಸಂಗ್ರಹ ಮಾಡುವುದು ಮತ್ತು ಬಯೋಗ್ಯಾಸ್ ಪ್ಲಾಂಟ್ ಗಳನ್ನು ನವೀಕರಿಸುವುದಾಗಿ ಸಭೆಯಲ್ಲಿ ನಿರ್ಣಯಿಸಿದರು. ಸಂಘಕ್ಕೆ ನೂತನವಾಗಿ ಎ ಸಿ ಸಬಾಷ್ಟಿಯನ್ ಮತ್ತು ಪೆರ್ನು ಗೌಡ ಎನ್. ಅವರನ್ನು ಸೇರ್ಪಡೆಗೊಳಿಸಿದ್ದು ಸಂಘದ ಉಪಾಧ್ಯಕ್ಷ ಲಕ್ಷ್ಮಣ ಗೌಡ ಪಾಂಗಳ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.









