ನಡ: ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಿಗೆ ವಯೋನಿವೃತ್ತಿ, ಸಾರ್ವಜನಿಕ ಅಭಿನಂದನೆ

0

ಬೆಳ್ತಂಗಡಿ: ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಚಂದ್ರಶೇಖ‌ರ್ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

“ಚಂದ್ರಶೇಖರ್ ಅವರು ಸಾತ್ವಿಕ ಸ್ವಭಾವದವರಾಗಿದ್ದು ಎಲ್ಲರಿಗೂ ಚಂದ್ರನಂತೆ ತಂಪನ್ನು ನೀಡುವವರು. ಯಾರನ್ನು ದ್ವೇಷಿಸದ ಅಜಾತಶತ್ರು” ಎಂದು ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಪ್ರಾಂಶುಪಾಲೆ ಲಿಲ್ಲಿ ಪಿವಿ ಪ್ರಸ್ತಾವನೆಯೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಸುರಕ್ಷಿತ, ಹಿರಿಯ ವಿದ್ಯಾರ್ಥಿ ನಿತೇಶ್, ಉಪನ್ಯಾಸಕಿ ವಸಂತಿ ಪಿ. ಪ್ರಾಂಶುಪಾಲರ ನಿಸ್ವಾರ್ಥ ಸೇವೆಯ ಬಗ್ಗೆ, ಕಾಲೇಜಿಗೆ ನೀಡಿದ ಸಾಕಷ್ಟು ಕೊಡುಗೆಗಳ ಬಗ್ಗೆ ಮಾತನಾಡಿದರು.

ಉಪನ್ಯಾಸಕಿ ಶಿಲ್ಪಾ ಡಿ. ಸನ್ಮಾನ ಪತ್ರವನ್ನು ವಾಚಿಸಿದ ಬಳಿಕ ಕಾಲೇಜಿನ ಉಪನ್ಯಾಸಕರು, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ನಡ ಪ್ರೌಢಶಾಲಾ ವಿಭಾಗದ ಅಧ್ಯಾಪಕರು, ಊರಿನವರು ಪ್ರತ್ಯೇಕವಾಗಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಚಂದ್ರಶೇಖ‌ರ್ ಅವರು ತಮ್ಮ ಆರಂಭದ ಬದುಕಿನ ಕಷ್ಟದ ದಿನಗಳ ಬಗ್ಗೆ, ತನ್ನ 32 ವರ್ಷಗಳ ವಿಸ್ತಾರವಾದ ಸೇವಾ ಅನುಭವಗಳ ಬಗ್ಗೆ, ಸೇವಾ ಸಂತೃಪ್ತಿಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.

ಮುಖ್ಯ ಅಭ್ಯಾಗತರಾಗಿ ಅಜಿತ್ ಆರಿಗ, ರಾಜಶೇಖರ ಅಜಿ, ಮುನಿರಾಜ ಅಜಿ, ಮೋಹನ್ ಬಾಬು, ಜನಾರ್ದನ ಗೌಡ, ನಾರ್ಬಟ್್ರ ಮಾರ್ಟಿಸ್, ಕಾಲೇಜು ನಾಯಕ ಭವಿತ್, ಕಾರ್ಯದರ್ಶಿ ಹೀನಾ ಕೌಸರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅಭ್ಯಾಗತರಾಗಿ ಅಜಿತ್ ಆರಿಗ, ರಾಜಶೇಖರ ಅಜಿ, ಮುನಿರಾಜ ಅಜಿ, ಮೋಹನ್ ಬಾಬು, ಜನಾರ್ದನ ಗೌಡ, ನಾರ್ಬಟ್್ರ ಮಾರ್ಟಿಸ್, ಕಾಲೇಜು ನಾಯಕ ಭವಿತ್, ಕಾರ್ಯದರ್ಶಿ ಹೀನಾ ಕೌಸರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ ಅವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಪವಿತ್ರ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here