ಉರುವಾಲು: ಕಾರಿಂಜ ಶ್ರೀ ವನಶಾಸ್ತಾರ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ: ಉರುವಾಲು ಶ್ರೀ ವನಶಾಸ್ತಾರ ದೇವಸ್ಥಾನ ಕಾರಿಂಜ ಬಾಯ್ತಾರು ಬ್ರಹ್ಮ ಕಲಶೋತ್ಸವ ಪ್ರಯುಕ್ತ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ರಕ್ಷಿತ್ ಶಿವರಾಂ ಆಗಮಿಸಿ ತಮ್ಮ ಜೊತೆಗಿದ್ದು ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದರು. ಸರಕಾರಿ ವಕೀಲರಾದ ಮನೋಹರ ಇಳಂತಿಲ, ಕೊರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ, ವೆಂಕಪ್ಪ ಬರಮೇಲು, ಟ್ರಸ್ಟ್ ನ ಅಧ್ಯಕ್ಷ ಕೊರಗಪ್ಪ ಪೂಜಾರಿ ಕಾರಿಂಜ, ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಕಾರಿಂಜ, ಉಮಾವತಿ ಕೋಡಿಯಡ್ಕ, ಟ್ರಸ್ಟ್ ಸದಸ್ಯರಾದ ಪ್ರಸಾದ್ ಶೆಟ್ಟಿ ಕೆರ್ಪುಣಿ, ಉಮಾವತಿ ಕಾರಿಂಜ, ಓಬಯ್ಯ ಕಾರಿಂಜ,ವಿನೋದರ ಸಾಲ್ಯಾನ್, ಉಪಸ್ಥಿತರಿದ್ದರು. ಬ್ರಹ್ಮ ಕಲಶೋತ್ಸವ ಕಾರ್ಯದರ್ಶಿ ತಾರನಾಥ ಸ್ವಾಗತಿಸಿ, ಧರ್ಣಪ್ಪ ನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here