ಜೆಸಿಐ ವಲಯ 15ರ ತರಬೇತಿ ವಿಭಾಗಕ್ಕೆ ಜೆಸಿಐ ಬೆಳ್ತಂಗಡಿಯ ಆಶಾಲತಾ ಪ್ರಶಾಂತ್ ಸಂಯೋಜಕರಾಗಿ ನಿಯೋಜನೆ

0

ಬೆಳ್ತಂಗಡಿ: ವಿಟ್ಲದಲ್ಲಿ ನಡೆದ ಜೆಸಿಐ ಭಾರತದ ವಲಯ 15ರ ಪದಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಬೆಳ್ತಂಗಡಿ ಜೆಸಿಐ ನ ಈ ವರ್ಷದ ಅಧ್ಯಕ್ಷೆಯಾದ ಜೇಸಿ ಆಶಾಲತಾ ಪ್ರಶಾಂತ್ ಅವರು 2026ರ ವಲಯಾಧ್ಯಕ್ಷ ಅವರಿಂದ ಪ್ರಮಾಣಚನ ಸ್ವೀಕರಿಸಿದರು.

ಅವರು 2026ನೇ ಸಾಲಿನ ವಲಯಾಡಳಿತ ಮಂಡಳಿಯ ತರಬೇತಿ ವಿಭಾಗದ ‘ಎಫೆಕ್ಟೀವ್ ಪಬ್ಲಿಕ್ ಸ್ಪೀಚ್, ಔಟ್‌ ಬಾಂಡಿಂಗ್ ಟ್ರೈನಿಂಗ್ ಪ್ರೋಗ್ರಾಂ, ಹಾಗೂ ಸ್ಪೀಚ್ ಕ್ರಾಫ್ಟ್’ ಇದರ ವಲಯ ಸಂಯೋಜಕರಾಗಿ ನಿಯೋಜನೆಗೊಂಡಿರುತ್ತಾರೆ. ಜೆಸಿಐ ಬೆಳ್ತಂಗಡಿಯ 48 ವರ್ಷ ಇತಿಹಾಸದಲ್ಲಿ ಪ್ರಥಮವಾಗಿ ಮಹಿಳಾ ಅಧ್ಯಕ್ಷರನ್ನು ಕಂಡ ಬೆಳ್ತಂಗಡಿ ಜೇಸಿ ಈ ವರ್ಷ ಜೇಸಿ ಆಶಾಲತಾ ಪ್ರಶಾಂತ್ ನಾಯಕತ್ವದಲ್ಲಿ ಜೇಸಿ ಸದಸ್ಯರಿಗೆ ಹಾಗೂ ಶಾಲಾ ಕಾಲೇಜು ಸಂಘ ಸಂಸ್ಥೆಗಳಿಗೆ ಹಲವಾರು ವಿಭಾಗದಲ್ಲಿ ತರಬೇತಿ ಆಯೋಜಿಸಿರುತ್ತಾರೆ.

ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವವದ ಮೂಲಕ ತಾಲೂಕಿನ ಯುವ ಪ್ರತಿಭೆಗಳಿಗೆ ವೇದಿಕೆ ಅವಕಾಶ ಹಾಗೂ ಸಾಧಕರಿಗೆ ಸಾಧನ ಶ್ರೀ ಪ್ರಶಸ್ತಿ ಮುಂತಾದ ಕಾರ್ಯಕ್ರಮ ನಡೆಸಿ ಯಶಸ್ವಿ ಅಧ್ಯಕ್ಷರಾಗಿ ಹೊರಹೊಮ್ಮಿದವರು.

LEAVE A REPLY

Please enter your comment!
Please enter your name here