ಮುಂಡಾಜೆ: ಮೂರ್ತಿಲ್ಲಾಯ ಭಕ್ತ ವೃಂದ ವತಿಯಿಂದ ನವರಾತ್ರಿ ಪ್ರಯುಕ್ತ ನಡೆಸಿದ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಉಳಿದ ರೂಪಾಯಿ 67,500/ ಮೊತ್ತವನ್ನು ಮೂರ್ತಿಲ್ಲಾಯ ದೈವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಅರ್ಚಕ ಮುರಳೀಧರ ಭಟ್, ದಿನೇಶ್ ಪಟವರ್ಧನ್, ರಾಮಣ್ಣ ಶೆಟ್ಟಿ ಅಗರಿ, ವೃಂದ, ಮೂರ್ತಿಲ್ಲಾಯ ಭಕ್ತ ವೃಂದದ ಸದಸ್ಯರುಗಳಾದ ಪುಷ್ಪರಾಜ್ ಶೆಟ್ಟಿ ಬಾವಂತಬೆಟ್ಟು, ನವೀತ್ ಶೆಟ್ಟಿ ನೆಯ್ಯಾಲು, ದಿನರಾಜ್ ಶೆಟ್ಟಿ ನೆಯ್ಯಾಲು, ಸುನೀಲ್ ಶೆಟ್ಟಿ ನೆಯ್ಯಾಲು, ಉಜ್ವಲ್ ಶೆಟ್ಟಿ ಹೊಸಗದ್ದೆ, ಸ್ವಸ್ತಿಕ್ ಶೆಟ್ಟಿ ಸೋಮಂತಡ್ಕ, ಪ್ರೀತೇಶ್ ಮಲ್ಲಿಕಟ್ಟೆ, ಭಕ್ತರು ಹಾಜರಿದ್ದರು.