ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಪ್ರಾರಂಭಗೊಂಡು 67 ವರ್ಷಗಳ ಸೇವೆ ಸಲ್ಲಿಸಿ 68ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸೆ.2ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ವಿಮಾ ಸಪ್ತಾಹದ ಉದ್ಘಾಟನೆಗೊಂಡಿತು.
ಈ ದಿನದ ಶಾಖೆಯ ಪ್ರಥಮ ಗ್ರಾಹಕರಾದ ಯಶೋಧರ ಇಂದ್ರ ಉದ್ಘಾಟಿಸಿದರು. ಶಾಖಾಧಿಕಾರಿ ವಿ.ಎಸ್ ಕುಮಾರ್ ಸ್ವಾಗತಿಸಿ, ಸಂಸ್ಥೆ 66 ವರ್ಷಗಳಿಂದ ಮಾಡುತ್ತಿರುವ ಗ್ರಾಹಕರ ಸೇವೆಯನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಅಗ್ರಗಣ್ಯ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ವರ್ಷದಲ್ಲಿ ದೇಶದಲ್ಲಿ 204.30 ಲಕ್ಷ ಪಾಲಿಸಿಗಳೊಂದಿಗೆ ರೂ. 222522.99 ಕೋಟಿ ಪ್ರಿಮಿಯಂ ಸಂಗ್ರಹಿಸಿ ಪಾಲಿಸಿಯಲ್ಲಿ ಶೇ.70 ಮತ್ತು ಪ್ರಿಮಿಯಂನಲ್ಲಿ ಶೇ. 59 ಮಾರ್ಕೆಟ್ ಗಳಿಸಿದೆ. 221.80 ಲಕ್ಷ ಪಾಲಿಸಿದಾರರಿಗೆ ರೂ. 230272.59 ಕೋಟಿ ವಿಮಾ ಮೊತ್ತ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ.ಶೆಟ್ಟಿ, ರಾಘವೇಂದ್ರ ಟಿ.ಡಿ., ಉದಯ ಶಂಕರ್, ವಿನಯ ಕುಮಾರ್, ಸಂದೀಪ್, ಆಡಳಿತ ವಿಭಾಗದ ಸಿಬ್ಬಂದಿಗಳಾದ ಹರಿಶ್ಚಂದ್ರ ಹೆಗ್ಡೆ, ಕೇಶವ ಎಂ, ವಿಮಾ ಪ್ರತಿನಿಧಿಗಳು, ಸಲಹೆಗಾರರ ಗ್ರಾಹಕರು ಉಪಸ್ಥಿತರಿದ್ದರು.