ಉಜಿರೆ: ಜನಾರ್ದನ ದೇವಸ್ಥಾನದ ರಥಬೀದಿ ಸಮೀಪದ ನಿವಾಸಿಯಾಗಿರುವ ಸುಪ್ರಭಾ ಪಿ (40 ವ) ಇವರು ಮನೆಯಲ್ಲಿ ಜಾರಿ ಬಿದ್ದು ತಲೆಗೆ ಬಲವಾದ ಏಟು ಬಿದ್ದ ಕಾರಣ, ಇವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.2ರಂದು ನಿಧನರಾದರು.
ವೃತ್ತಿಯಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಚಾರ್ಮಾಡಿಯಲ್ಲಿ ಒಂದು ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತಿ ರವಿರಾಜ್ ಶೆಟ್ಟಿ, ಮಕ್ಕಳಾದ ವೇದಾಂತ್, ಚರಿತ್ ಇವರನ್ನು ಅಗಲಿದ್ದಾರೆ.
p>