ಶಿಶಿಲ: ಶ್ರೀ ದುರ್ಗಾ ಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ವತಿಯಿಂದ 27ನೇ ಮೊಸರು ಕುಡಿಕೆ ಉತ್ಸವ- ಗಮನ ಸೆಳೆದ ಪುರಾತನ ವಸ್ತುಗಳ ಪ್ರದರ್ಶನ

0

ಶಿಶಿಲ: ಶ್ರೀ ದುರ್ಗಾ ಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಶಿಶಿಲ ಇದರ ವತಿಯಿಂದ ಇಪ್ಪತ್ತೇಳನೇ ವರುಷದ ಮೊಸರುಕುಡಿಕೆ ಉತ್ಸವ ಸೆ.1ರಂದು ವಿಜೃಂಭಣೆಯಿಂದ ಜರುಗಿತು.ಪುರಾತನ ಕಾಲದ ವಸ್ತುಗಳ ಪ್ರದರ್ಶನ ನೋಡುಗರಿಗೆ ಮುದ ನೀಡಿದ್ದು ವಿಶೇಷವಾಗಿತ್ತು.

ಸಾರ್ವಜನಿಕರಿಗಾಗಿ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ, ಮಲ್ಲಕಂಬ, ಜಾರುಕಂಬ, ಗೋಣಿ ಚೀಲ ಓಟ, ಗುಡ್ಡಗಾಡು ಓಟ, ಕೆಸರುಗದ್ದೆ ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳು ಭಕ್ತಿ ಗೀತೆ ಸ್ಪರ್ಧೆಗಳು ನಡೆದವು.ಮಕ್ಕಳಿಗಾಗಿ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಿತು.

ಸ್ಥಳೀಯ ಅಂಗನವಾಡಿ ಹಾಗೂ ವಾಲ್ಮೀಕಿ ಆಶ್ರಮ ಶಾಲೆ ಹಾಗೂ ಹೇವಾಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕಮಂಡಲದ ಅಧ್ಯಕ್ಷರಾದ ಹರೀಶ ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಿನ್, ನಿಕಟಪೂರ್ವ ಅಧ್ಯಕ್ಷ ಸಂದೀಪ್ ಎ.ಎಸ್., ಅರಸಿನಮಕ್ಕಿ ಲತೇಶ ಯಕ್ಷಗಾನ ಕಲಾ ಕೇಂದ್ರದ ಯಕ್ಷ ಗುರುಗಳಾದ ಸುಂದರಗೌಡ, ಕೌಕ್ರಾಡಿ ಗ್ರಾಮ ಲೆಕ್ಕಾಧಿಕಾರಿಗಳಾದ ಲಾವಣ್ಯ ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರಾದ ಕರುಣಾಕರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಸುಗುಣ ಕುಮಾರಿ ಹೆಚ್ ಇವರಿಗೆ ಗೌರವಾರ್ಪಣೆ ಹಾಗೂ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಥಳೀಯ ಅಂಗನವಾಡಿ ಹಾಗೂ ವಾಲ್ಮೀಕಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಿತಿನ್ ಬೈರಕಟ್ಟ ಸ್ವಾಗತಿಸಿದರು.ಶರತ್ ಹಾಗೂ ರಾಮಚಂದ್ರ ಕೆ ಬಹುಮಾನ ವಿಜೇತರ ಪಟ್ಟಿ ಓದಿದರು.ಸುಂದರ ಕೆ ಪ್ರಾಸ್ತಾವಿಕ ಮಾತನಾಡಿದರು. ಸತೀಶ ಕೆ.ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here