ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಉದ್ಘಾಟನೆ- ಮಾಜಿ ಸೈನಿಕರಿಗೆ ಸಂಘದ ವತಿಯಿಂದ ಗೌರವಾರ್ಪಣೆ

0

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಬೆಳ್ತಂಗಡಿ ತಾಲೂಕು ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಬೆಳ್ತಂಗಡಿ ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಇವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಆ.18ರಂದು ರವಿವಾರ ವಾಣಿ ಶಿಕ್ಷಣ ಸಂಸ್ಥೆಗಳ ಹಿಂಭಾಗದ ಗದ್ದೆಯಲ್ಲಿ ಆದ್ದೂರಿಯಾಗಿ ಜರುಗಿತು.

ಉದ್ಘಾಟನೆಯನ್ನು ಲೋಕಯ್ಯ ಗೌಡ, ಜಿಲ್ಲಾಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ, ಮಂಗಳೂರು ಇವರು ದೀಪಬೆಳಗಿಸಿ, ಹಿಂಗಾರ ಅರಳಿಸಿ ನೇರವೇರಿಸಿದರು.

ಅಧ್ಯಕ್ಷತೆಯನ್ನು ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹರೀಶ್ ಪೂಂಜ, ಶಾಸಕರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಪ್ರತಾಪಸಿಂಹ ಮಾಜಿ ಸಂಸದರು ಮೈಸೂರು, ಹೆಚ್.ಪದ್ಮ ಗೌಡ, ಗೌರವಾಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ, ಗಣೇಶ್ ಗೌಡ ಕಾರ್ಯದರ್ಶಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ, ನಾಗೇಶ್ ಕುಮಾ‌ರ್, ಮಾಲಕರು ಶ್ರೀ ಸ್ವಾಮಿಪ್ರಸಾದ್‌ ಕನ್‌ಸ್ಟ್ರಕ್ಷನ್ಸ್ ಲ್ಯಾಲ, ಡಾ| ಪ್ರೇಮ್ ಕುಮಾರ್ ಪ್ರಾಂಶುಪಾಲರು ಫಿಸಿಯೋಥೆರಪಿ ಕಾಲೇಜು, ಕಿಮ್ಸ್ ಬೆಂಗಳೂರು, ಭಾಸ್ಕರ್ ಗೌಡ ದೇವಸ್ಯ ಅಧ್ಯಕ್ಷರು, ಜ್ಞಾನರತ್ನ ಎಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್‌ ನಿದ್ದೊಡಿ ಕಟೀಲು, ಅಕ್ಷಯ್ ಕುಮಾ‌ರ್ ಕುರುಂಜಿ, ಪ್ರಧಾನ ಕಾರ್ಯದರ್ಶಿಗಳು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಕಿರಣ್‌ಚಂದ್ರ ಪುಷ್ಪಗಿರಿ, ಉದ್ಯಮಿಗಳು, ಬೆಂಗಳೂರು, ಆನಂದ ಗೌಡ ಹೆಚ್.ಪಿ., ನಿರ್ದೇಶಕರು ಕೆನರಾ ಕೈಗಾರಿಕಾ ಸಂಘ, ಮಂಗಳೂರು,ಕೃಷ್ಣಪ್ಪ ಗೌಡ ಸವಣಾಲು ಸಂಘಟನಾ ಕಾರ್ಯದರ್ಶಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ, ನವೀನ್ ಚಂದ್ರ ಭೋಜಾರ, ಮಾಸ್ಟರ್ ಕ್ರಾಫ್ಟ್‌ಮ್ಯಾನ್ ಕೊಂಕಣ್ ರೈಲ್ವೆ (ಸಿಗ್ನಲ್ ಮತ್ತು ಟೆಲಿ ಕಮ್ಯುನಿಕೇಶನ್), ಸುರೇಶ್‌ ಬೈಲು, ಅಧ್ಯಕ್ಷರು. ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಡಬ, ಮೋನಪ್ಪ ಗೌಡ, ಅಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ವಿಟ್ಲ ಬಂಟ್ವಾಳ, ಗಂಗಾಧರ ಗೌಡ ಪಿ.ಎಸ್‌., ಅಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಸುಳ್ಯ, ರವಿ ಮುಂಗ್ಲಿಮನೆ, ಅಧ್ಯಕ್ಷರು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಪುತ್ತೂರು, ಎನ್. ಜತ್ತಣ್ಣ ಗೌಡ, ಬೆಳಾಲು, ಮಾಜಿ ಅಧ್ಯಕ್ಷರು, ತಾಲೂಕು ಪಂಚಾಯತ್, ಬೆಳ್ತಂಗಡಿ, ತಿಮ್ಮಪ್ಪ ಗೌಡ, ಮಾಜಿ ಅಧ್ಯಕ್ಷರು, ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಗೀತಾ ರಾಮಣ್ಣ ಗೌಡ ಅಧ್ಯಕ್ಷರು, ತಾಲೂಕು ಮಹಿಳಾ ವೇದಿಕೆ ಬೆಳ್ತಂಗಡಿ, ಪುರಂದರ ಗೌಡ, ಭೋಜಾರ, ಉಪನಿರೀಕ್ಷಕರು, ಕಮೀಷನ‌ರ್ ಕಚೇರಿ ಮಂಗಳೂರು,ಡಾ| ರಜತ್ ಹೆಚ್.ಪಿ., ಎಲುಬು ಶಸ್ತ್ರ ಚಿಕಿತ್ಸಾಕ ತಜ್ಞರು ಬೆನಕ ಆಸ್ಪತ್ರೆ ಉಜಿರೆ, ಡಾ| ಕಿರಣ್ ಹರಿ ಎಲುಬು ಶಸ್ತ್ರ ಚಿಕಿತ್ಸಾಕ ತಜ್ಞರು, ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಮಂಗಳೂರು, ಪ್ರತೀಶ್ ಕಂದಾಯ ನಿರೀಕ್ಷಕರು ಬೆಳ್ತಂಗಡಿ ಹೋಬಳಿ, ಪೂರ್ಣಿಮಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಳದಂಗಡಿ, ಡಾ। ಕೃತಿಕಾ ಎಸ್‌. ತಂಗೆತ್ತಿಪಾಲು, ಫಿಸಿಯೋಥೆರಪಿಸ್ಟ್‌, ಗಣೇಶ್ ಕ್ಲಿನಿಕ್, ಬೆಳ್ತಂಗಡಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಕುಶಾಲಪ್ಪ ಗೌಡ ನೆಕ್ಕರಾಜೆ ಸ್ಥಾಪಕರು ಹಾಗೂ ಯೋಗ ಚಿಕಿತ್ಸಕರು ಆವಿಷ್ಕಾರ ಯೋಗ ಮಂಗಳೂರು, ಗೋಲ್ಡನ್ ಬುಕ್ ವರ್ಲ್ಡ್ರೆಕಾರ್ಡ್ ವಿಜೇತರು ಹಾಗೂ ಮಾಜಿ ಸೈನಿಕರಾದ ಕಾಂತಪ್ಪ ಗೌಡ, ಮಂಜುನಾಥ ಕೆ.ಎ, ಲಕ್ಷ್ಮಣ ಸೇರಿದಂತೆ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಗೌರವಾಧ್ಯಕ್ಷ ಹೆಚ್‌.ಪದ್ಮಗೌಡ, ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ ಧರ್ಣಪ್ಪ ಗೌಡ ಬಂದಾರು, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಉಪಾಧ್ಯಕ್ಷರಾದ ಪ್ರಶಾಂತ್ ಅಂತರ, ನಿತಿನ್ ಕಲ್ಮಂಜ, ಕೋಶಾಧಿಕಾರಿ ರಂಜಿತ್ ಕಳೆಂಜ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷ ಗೀತಾ ರಾಮಣ್ಣ ಗೌಡ, ಗೌರವಾಧ್ಯಕ್ಷ ಸುಭಾಷಿಣಿ ಜನಾರ್ದನ ಗೌಡ, ಕಾರ್ಯದರ್ಶಿ ಲೀಲಾ ಬೆಳಾಲ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಡಿದರು ಸಂಘದ ನಿರ್ದೇಶಕ ಗೋಪಾಲಕೃಷ್ಣ ಗುಲ್ಲೋಡಿ ಸ್ವಾಗತಿಸಿದರು. ಮೀನಾಕ್ಷಿ ರವರು ಕಾರ್ಯಕ್ರಮ ನಿರೂಪಿಸಿದರು.ಮೋಹನ್ ಗೌಡ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here