ಶಿಬಾಜೆ: ಭಜನಾ ತರಬೇತುದಾರ ಹರೀಶ್ ನೆರಿಯ ಅವರ ಮನೆ ಅಚಾನಕ್ ಆಗಿ ಬೆಂಕಿ ತಗುಲಿ ಪೂರ್ತಿ ಸುಟ್ಟು ಹೋಗಿತ್ತು. ಹರೀಶ್ ನೆರಿಯ ಅವರು ನಿಸ್ವಾರ್ಥ ಮನೋಭಾವದಿಂದ ಅನೇಕ ಭಜನಾ ಮಂಡಳಿಗಳಿಗೆ ತೆರಳಿ ಉಚಿತವಾಗಿ ಭಜನಾ ತರಬೇತಿ ನೀಡುತ್ತಿದ್ದರು. ಇವರ ನಿಸ್ವಾರ್ಥ ಸೇವೆಯನ್ನು ಕಂಡು ಅನೇಕ ಸಂಘ ಸಂಸ್ಥೆಗಳು ಇವರ ಮನೆ ನಿರ್ಮಾಣಕ್ಕೆ ಪಣತೊಟ್ಟಿದ್ದು, ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯರು ಅವರ ಮನೆಗೆ ಭೇಟಿ ನೀಡಿ ಮಂಡಳಿಯಿಂದ ಮನೆ ನಿರ್ಮಾಣ ಕಾರ್ಯಕ್ಕೆ ಸಹಾಯಧನ ನೀಡಿ ಸಹಕರಿಸಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ಹರೀಶ್ ನೆರಿಯ ಮನೆ ಪುನರ್ ನಿರ್ಮಾಣಕ್ಕೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಸಹಾಯಧನ