ಬೆಳ್ತಂಗಡಿ: ಲಯನ್ಸ್ ಕ್ಲಬ್ ನಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ನಿಕಟಪೂರ್ವ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೋ ಅಧ್ಯಕ್ಷೆ ಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೌರ ಕಾರ್ಮಿಕರ ಸೇವೆಯ ಬಗ್ಗೆ ಕಾರ್ಯಕ್ರಮ ಸಂಯೋಜಕ ವಸಂತ ಶೆಟ್ಟಿ ಶ್ರದ್ಧಾ ಪ್ರಾಸ್ತವಿಸಿದರು. ಪೂರ್ವಧ್ಯಕ್ಷರಾದ ರಾಜು ಬಿ. ಶೆಟ್ಟಿ, ಧರನೇಂದ್ರ ಕೆ.ಜೈನ್, ರಾಮಕೃಷ್ಣ ಗೌಡ, ಜಯರಾಮ್ ಭಂಡಾರಿ, ಸುಶೀಲ ಹೆಗ್ಡೆ, ಹೇಮಂತ್ ರಾವ್ ಎರ್ಡೂರ್, ಅಶೋಕ್ ಬಿ.ಪಿ., ಸದಸ್ಯರಾದ ನಾಣ್ಯಪ್ಪ ನಾಯ್ಕ್, ಸುರೇಶ ಶೆಟ್ಟಿ ಲಾಯಿಲ ಸಹಕರಿಸಿದರು. ಪಟ್ಟಣ ಪಂಚಾಯತಿನ 11 ಪೌರ ಕಾರ್ಮಿಕರು ಗೌರವ ಸ್ವೀಕರಿಸಿದರು.