

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೇದುವಿನ ಕೊಲ್ಲೆತ್ಯಾರು ಬೋಲ್ಡೆಲು ಸಂಪರ್ಕ ರಸ್ತೆ ಬದಿಯ ಗಿಡ ಗಂಟಿಗಳನ್ನು ಸ್ಥಳೀಯ ಯುವಕರು ಶ್ರಮದಾನ ಮೂಲಕ ತೆರವು ಕಾರ್ಯಾಚರಣೆ ಆ.18ರಂದು ನಡೆಸಿದರು.
ಸಾರ್ವಜನಿಕ ಆಸ್ತಿ ನಮ್ಮ ಆಸ್ತಿ ಎನ್ನುವ ಪರಿಕಲ್ಪನೆಯಿಂದ ನಮ್ಮ ರಸ್ತೆಯ ನಿರ್ವಹಣೆ ನಮ್ಮ ಕರ್ತವ್ಯ ಎನ್ನುವ ಧ್ಯೇಯದೊಂದಿಗೆ ಯುವಕರ ತಂಡ ಶ್ರಮದಾನ ಮೂಲಕ ತೆರವು ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಶ್ರಮದಾನದಲ್ಲಿ ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ವಸಂತ ಬೋಲ್ಡೆಲು, ಶ್ರೀ ದುರ್ಗಾ ಅರ್ಥ್ ಮೂವರ್ಸ್ ನ ಮಾಲಕ ಪ್ರಶಾಂತ್ ಬೋಲ್ಡೆಲು, ಸಂತೋಷ್ ಕೋಡಿಬೆಟ್ಟು, ಉಮೇಶ್, ದೀಪಕ್, ನಿತೇಶ್ ಪಾಲೇದು, ಸಾತ್ವಿಕ್, ವರದಿಗಾರ ಮನೀಶ್ ವಿ.ಅಂಚನ್ ಹಾಗೂ ವಿಜಯ್ ಕುಮಾರ್ ಪುಪಾಡಿಕಲ್ಲು ಭಾಗಿಯಾಗಿದ್ದರು.