


ಓಡಿಲ್ನಾಳ: ಸ.ಉ.ಪ್ರಾ.ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೂ.5ರಂದು ಹಮ್ಮಿಕೊಳ್ಳಲಾಯಿತು.


ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹ ಶಿಕ್ಷಕಿ ನಯನರವರು ಮಾತನಾಡಿ ಪರಿಸರದ ಬಗ್ಗೆ ಕಾಳಜಿ ಪ್ರತಿ ವಿದ್ಯಾರ್ಥಿಗೂ ಅತ್ಯಗತ್ಯ ಇದು ಬಾಲ್ಯದಿಂದಲೇ ಬಂದರೆ ಉತ್ತಮ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮೊದಲು ನಾವು ಪ್ರೀತಿಸಬೇಕು ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸಬೇಕು ಎಂದು ತಿಳಿಸಿದರು.









