ಬೆಳ್ತಂಗಡಿ: ಹತ್ತು ದಿನಗಳ ಕಾಲ ಎಸ್.ಐ.ಟಿ ಕಸ್ಟಡಿಯಲ್ಲಿದ್ದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಮತ್ತೆ ನ್ಯಾಯಾಲಯ ಮೂರು ದಿನಗಳ ಕಾಲ ಎಸ್.ಐ.ಟಿ ಕಸ್ಟಡಿಗೆ ನೀಡಿದೆ.
ಆ.23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್.ಐ.ಟಿ ಅಧಿಕಾರಿಗಳು ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದು, ಇದೀಗ ಬಹಳಷ್ಟು ತನಿಕೆ ಕಾರ್ಯ ಮತ್ತು ಮಹಜರು ಕಾರ್ಯ ಬಾಕಿಯಿರುವುದರಿಂದ ಸೆ.3ರಂದು ಮತ್ತೆ ಮೂರು ದಿನಗಳ ಕಾಲ ಕಸ್ಟಡಿಗೆ ಕೇಳಿಕೊಂಡಿದೆ. ಈ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ಎಸ್.ಐ.ಟಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.