ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಮೈಸೂರು ನಗರ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ನೇತೃತ್ವದಲ್ಲಿ ಸೆ.3ರಂದು ಧರ್ಮಸ್ಥಳ ಯಾತ್ರೆ ನಡೆಯಿತು.

ಚಾಮರಾಜದಿಂದ ಅನೇಕ ವಾಹನಗಳ ಮೂಲಕ ಹೊರಟು ಸಂಜೆ ಕ್ಷೇತ್ರವನ್ನು ತಲುಪಿದ್ದಾರೆ. ನೂರಾರು ಸಂಖ್ಯೆಯಲ್ಲಿ ಧರ್ಮಸ್ಥಳ ದ್ವಾರದಿಂದ ದೇವಸ್ಥಾನದ ಮುಂಭಾಗದವರೆಗೆ ಘೋಷಣೆಯನ್ನು ಕೂಗುತ್ತಾ ಪಾದಯಾತ್ರೆ ನಡೆಸಿದರು.ಸೆ.4ರಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಪ್ರಸಾದ ಸ್ವೀಕರಿಸಿ ಬರುವುದಾಗಿ ಸುದ್ದಿಗೆ ತಿಳಿಸಿದ್ದಾರೆ.