ಮುಂಡಾಜೆ: ವಲಯ ಮಟ್ಟದ ಖೋಖೋ ಪಂದ್ಯಾಟವು ಮುಂಡಾಜೆ ಸ.ಉ.ಪ್ರಾ. ಶಾಲೆಯಲ್ಲಿ ಸೆ.3ರಂದು ನಡೆಯಿತು.
ಮುಂಡಾಜೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಬಂಗೇರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಉಜಿರೆ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮ, ಉಜಿರೆ ವಲಯದ ಕ್ರೀಡಾ ಮೇಲ್ವಿಚಾರಕ ಗಿರೀಶ್ ಉಜಿರೆ ಹಾಗೂ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.
ವಿಜೇತ ತಂಡಕ್ಕೆ ಸಮಾರೋಪ ಸಮಾರಂಭದಲ್ಲಿ ಯಂಗ್ ಚಾಲೆಂಜರ್ಸ್ ಮುಂಡಾಜೆ ಸಂಚಾಲಕ ನಾಮ್ ದೇವ್ ರಾವ್ ಬಹುಮಾನ ನೀಡಿ ಗೌರವಿಸಿದರು. ಕಾರ್ಯಕ್ರಮ ಊರವರ ಸಹಕಾರದೊಂದಿಗೆ ಅತ್ಯಂತ ಉತ್ತಮ ರೀತಿಯಲ್ಲಿ ನೆರವೇರಿತು.
ಶಾಲಾ ಮುಖ್ಯೋಪಾಧ್ಯಾಯ ಮಂಜುಳಾ ಹೆಚ್. ಸ್ವಾಗತಿಸಿ, ವಂದಿಸಿದರು.