ಬಸ್ ನಿಲ್ದಾಣದ ಸಾಮಾಗ್ರಿಗಳನ್ನು ಕಾನೂನು ಪ್ರಕಾರವೇ ವಿಲೇವಾರಿ ಮಾಡಲಾಗಿದ್ದರೂ ಅಪಪ್ರಚಾರ: ಸೋಶಿಯಲ್ ಮೀಡಿಯಾದಲ್ಲಿ ಹಾಕುವವರ ಹಿಂದೆ ಪ.ಪಂ. ಸದಸ್ಯ ಜಗದೀಶ್ ಇದ್ದಾರೆ: ಆರೋಪ-ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಬಸ್ ನಿಲ್ದಾಣದ ಸಾಮಾಗ್ರಿಗಳನ್ನು ಪಟ್ಟಣ ಪಂಚಾಯತ್ ಕಾನೂನು ಪ್ರಕಾರವೇ ವಿಲೇವಾರಿ ಮಾಡಿದ್ದರೂ ಚರ್ಚ್ ರೋಡ್‌ನ ಇಂಟರ್ ಲಾಕ್‌ಗಳನ್ನು ಹಾಗೂ ಬಸ್ ನಿಲ್ದಾಣದ ಸಾಮಾಗ್ರಿಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಕುವವರ ಹಿಂದೆ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಇದ್ದಾರೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಹೇಳಿದ್ದಾರೆ.

ಅ.೨೧ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದ ಅವರು ಚರ್ಚ್ ಬಳಿಯ ಇಂಟರ್ ಲಾಕ್ ಅನ್ನು ಜನರ ಸೇವೆಗಾಗಿ ಲಾಯಿಲ ಸ್ಮಶಾನಕ್ಕೆ ಹಾಕಲು ಸಭೆಯಲ್ಲಿ ನಿರ್ಣಯಿಸಿ ಉಚಿತವಾಗಿ ಪಟ್ಟಣ ಪಂಚಾಯತ್‌ನಿಂದ ನೀಡಿzವೆ. ಆದರೆ ಕೆಲವು ವ್ಯಕ್ತಿಗಳು ಪಟ್ಟಣ ಪಂಚಾಯತ್ ಅಧ್ಯಕ್ಷನಾದ ನನ್ನ ಮತ್ತು ಮುಖ್ಯಾಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ. ಇದನ್ನು ನಾನು ಯಾವ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲು ಸಿದ್ಧನಿzನೆ. ಇನ್ನು ಬಸ್‌ಸ್ಟ್ಯಾಂಡ್ ಸಾಮಾಗ್ರಿಗಳನ್ನು ದಾಸ್ತಾನು ಕಟ್ಟಡಕ್ಕೆ ಉಪಯೋಗ ಮಾಡಿzವೆ. ಜೂನಿಯರ್ ಕಾಲೇಜಿನ ಸೈನ್ಸ್ ಬ್ಲಾಕ್‌ಗೆ ಇಂಟರ್‌ಲಾಕ್ ಆಳವಡಿಸಲು ಅನುದಾನ ಅಥವಾ ಹಳೆಯ ಇಂಟರ್ ಲಾಕ್ ನೀಡಬೇಕು ಎಂದು ಹೇಳಿದಾಗ ಪಟ್ಟಣ ಪಂಚಾಯತ್‌ನಿಂದ ಜೂನಿಯರ್ ಕಾಲೇಜಿಗೆ ಅನುದಾನ ಕೊಡಲು ಸಾಧ್ಯವಿಲ್ಲದಿದ್ದಾಗ ಪಂಚಾಯತ್‌ನಿಂದ ತೆಗೆದ ಇಂಟರ್‌ಲಾಕ್ ಅನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು ಅದನ್ನು ನಾವು ಜೂನಿಯರ್ ಕಾಲೇಜಿಗೆ ನೀಡಿzವೆ. ಸುಮ್ಮನೆ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಕುವವರ ಹಿಂದೆ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಇದ್ದಾರೆ ಎಂದು ಆರೋಪಿಸಿದರು.

ಬ್ರೋಕರ್ ವ್ಯವಸ್ಥೆ ಇರಲಿಲ್ಲ: ಹಿಂದೆ ಪಟ್ಟಣ ಪಂಚಾಯತ್‌ನಲ್ಲಿ ಬ್ರೋಕರ್ ವ್ಯವಸ್ಥೆ ಇರಲಿಲ್ಲ. ತಾಲೂಕು ಪಂಚಾಯತ್‌ನಲ್ಲಿ ತುಂಬಾ ಜನ ಬ್ರೋಕರ್ ಇದ್ದಾರೆ. ಪಟ್ಟಣ ಪಂಚಾಯತ್‌ನಲ್ಲಿ ಇರಲಿಲ್ಲ. ಆದರೆ ಪಿಐಡಿ ಖಾತೆ ಬದಲಾವಣೆಯ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಇದೆ. ಅದನ್ನು ಇಟ್ಟುಕೊಂಡು ಪಟ್ಟಣ ಪಂಚಾಯತ್‌ನ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ಮಾಡುವ ದಂಧೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಬ್ರೋಕರ್ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ ಪಟ್ಟಣ ಪಂಚಾಯತ್ ಅಧ್ಯಕ್ಷರು ಕಳೆದ ವಿಧಾನಸಭೆ ಚುನಾವಣೆಯ ಸಂಧರ್ಭದಲ್ಲಿ ಹಣ ವಿತರಣೆ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತು. ಆದರೆ ನನ್ನ ಹತ್ತಿರ ಒಂದು ಪೈಸ ಹಣ ಇರಲಿಲ್ಲ. ಅಂಚಿನಡ್ಕ ಎಂಬ ಪ್ರದೇಶದಲ್ಲಿ ರಕ್ಷಿತ್ ಶಿವಾರಂರವರು ಹಣ ಕೊಡಲು ಬರುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಅದಕ್ಕಾಗಿ ನಾನು ಮತ್ತು ಕೆಲವು ಕಾರ್ಯಕರ್ತರು ಅಲ್ಲಿಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ರಕ್ಷಿತ್ ಶಿವರಾಂ ಅಲ್ಲಿಗೆ ಬಂದಿದ್ದರು. ಅಲ್ಲಿ ಎರಡು ಮನೆಗೆ ಹೋಗಿದ್ದಾರೆ, ಹಣ ಕೊಟ್ಟಿದ್ದಾರೆ. ಅದನ್ನು ಅವರು ನಮ್ಮ ಮೇಲೆ ಹಾಕಿ ಅವರು ಹಣವನ್ನು ಹಂಚಿದ್ದಾರೆ ಎಂದು ಸುಖಾಸುಮ್ಮನೆ ಗಲಾಟೆ ಎಬ್ಬಿಸಿದ್ದಾರೆ. ಈಗ ಸ್ಮಶಾನದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಾರು ಸ್ಮಶಾನದಲ್ಲಿ ರಾಜಕೀಯ ಮಾಡುತ್ತಾರೆ ಅವರು ಖಂಡಿತ ಅದೇ ಸ್ಮಶಾನಕ್ಕೆ ಹೋಗುತ್ತಾರೆ. ಬಡವರಿಗಾಗಿ ಸ್ಮಶಾನ ಮಾಡುವಂತದು. ಇದರಲ್ಲಿ ಇವರು ರಾಜಕೀಯ ಮಾಡಬಾರದು. ಬ್ರೋಕರ್ ಜಗದೀಶನ ಗುರು ಭ್ರಷ್ಟಾಚಾರ ಕುಟುಂಬದಿಂದ ಬಂದ ಬ್ರಹ್ಮಾಂಡ ಭ್ರಷ್ಟಾಚಾರಿ. ಈಗ ಇವರು ನಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ತೇಜೋವಧೆ ಮಾಡುತ್ತಿದ್ದಾರೆ. ಮೊದಲು ಇದ್ದ ವಸಂತ ಬಂಗೇರರು, ಹರೀಶ್ ಕುಮಾರ್, ಗಂಗಾಧರ್ ಗೌಡರು ಇಂತಹ ದ್ವೇಷದ ರಾಜಕಾರಣ ಮಾಡಲಿಲ್ಲ. ರಕ್ಷಿತ್ ಶಿವರಾಂ ಇಲ್ಲಿಗೆ ಬಂದ ನಂತರ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘದಿಂದ ತೆಗೆದಿದ್ದಾರೆ: ಬ್ರೋಕರ್ ಜಗದೀಶ್ ಹಿಂದೆ ಔಷಧಿ ವ್ಯಾಪರಸ್ಥಾರ ಸಂಘದ ಅಧ್ಯಕ್ಷರಾಗಿದ್ದರು. ಹಲವು ವರ್ಷ ಜಗದೀಶ್‌ರವರು ಅಧ್ಯಕ್ಷರಾಗಿದ್ದರು. ಇವರಿಗೆ ಒಬ್ಬ ಡ್ರಗ್ ಕಂಟ್ರೋಲರ್ ಇದ್ದ. ಎಲ್ಲಾ ಔಷಧಿ ವ್ಯಾಪಾರಗಳಲ್ಲಿ ಇವನು ಹಣ ವಸೂಲಿ ಮಾಡಿ ಡ್ರಗ್ ಕಂಟ್ರೋಲರ್‌ಗೆ ಕೊಡಲು ಉಂಟು ಎಂದು ಹೇಳುತ್ತಿದ್ದರು. ಆದರೆ ಇವರು ಅರ್ಧ ಹಣವನ್ನು ಇಟ್ಟುಕೊಂಡು ಅರ್ಧ ಕೊಡುವುದು. ಇದು ಡ್ರಗ್ ಕಂಟ್ರೋಲರ್‌ಗೆ ಗೊತ್ತಾಗಿ ಸಂಘದಿಂದ ತೆಗೆದಿದ್ದಾರೆ. ಅವನೊಬ್ಬ ಭ್ರಷ್ಟಾಚಾರಿ ಅಲ್ಲದಿದ್ದರೆ ಯಾಕೆ ಔಷಧಿ ವ್ಯಾಪಾರ ಕೇಂದ್ರದಲ್ಲಿ ಅವರು ಇಲ್ಲ ಎಂದು ಹೇಳಿದ ಅಧ್ಯಕ್ಷರು ಬ್ರೋಕರ್ ಜಗದೀಶ್‌ನ ಕೆಲಸ ಏನೆಂದರೆ ಪ್ರತಿ ಕೆಲಸದಲ್ಲಿ ಹೋಗಿ ಕಳಪೆ ಕಾಮಗಾರಿ ಎಂದು ಹೇಳಿ ಗುತ್ತಿಗೆದಾರರಿಗೆ ಬೆದರಿಕೆ ಹಾಕುವುದು. ಅವರಿಂದ ಹಣ ವಸೂಲಿ ಮಾಡುವುದು. ಅವರು ಹಣ ಕೊಟ್ಟರೆ ಅವರ ಸುದ್ದಿಗೆ ಹೋಗುವುದಿಲ್ಲ. ಬ್ಯಾಂಕಿನ ಅಧ್ಯಕ್ಷರು ಲೋನ್ ಕೊಡಲಿಲ್ಲ ಎಂಬ ಕಾರಣಕ್ಕೆ ವಿಘ್ನೇಶ್ ಕಾಂಪ್ಲೆಕ್ಸ್ ಬಳಿಯ ಚರಂಡಿಯ ದೊಡ್ಡ ರಾದ್ಧಾಂತ ಮಾಡಿ ದೊಡ್ಡ ಸುದ್ದಿ ಮಾಡಿದ್ದಾನೆ. ಇದಕ್ಕೆ ಕಾರಣ ಬ್ರೋಕರ್ ಜಗದೀಶ್ ಎಂದರು.

ಭ್ರಷ್ಟಾಚಾರ ಮಾಡಿಲ್ಲ: ನಾನು ಪ್ರಾಮಾಣಿಕವಾಗಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷನಾಗಿ, ಅಧ್ಯಕ್ಷನಾಗಿ ಕೆಲಸ ಮಾಡಿzನೆ. ಯಾರು ಯಾವ ಸಂಧರ್ಭದಲ್ಲಿ ಸಹಾಯ ಕೇಳಿದರೂ ನಾನು ಸ್ಪಂದಿಸಿzನೆ. ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೆ ಪ್ರಾಮಾಣಿಕವಾಗಿ ಕೆಲಸ ಮಾಡಿzನೆ. ನಾನು ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಲಾಯಿಲ ಹಿಂದೂ ರುಧ್ರ ಭೂಮಿ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಣೈ ಮತ್ತು ಬೆಳ್ತಂಗಡಿ ಹಿಂದೂ ರುಧ್ರ ಭೂಮಿ ಸಮಿತಿಯ ಅಧ್ಯಕ್ಷ ಶಶಿಧರ ಪೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here