ಬೆಳ್ತಂಗಡಿ: ತಾಲೂಕು ನೆರಿಯ ಗ್ರಾಮದ ಕೊಲೋಡಿ ನಿವಾಸಿ ಬಾಲಚಂದ್ರ ಮಲೆಕುಡಿಯ ಅವರು ತಮ್ಮ ತೋಟದಲ್ಲಿ ಮರಕಡಿಯುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದು ಚಿಕಿತ್ಸೆಯ ನಂತರ ಮಲಗಿದಲ್ಲಿಯೇ ಇದ್ದು ಪ್ರಸ್ತುತ ಕೊಕ್ಕಡದಲ್ಲಿ ಪತ್ನಿಯವರ ಮನೆಯಲ್ಲಿದ್ದು ಇವರ ಪರಿಸ್ಥಿತಿಯನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒದಗಿಸಲಾದ ವೀಲ್ ಚಯರ್ ಅನ್ನು ಕೊಕ್ಕಡ ವಲಯ ಮೇಲ್ವಿಚಾರಕಿ ಭಾಗೀರಥಿ ಮತ್ತು ರೋಹಿಣಿ ವಿತರಿಸಿದರು. ಇವರ ಜೊತೆ ಒಕ್ಕೂಟದ ಪದಾಧಿಕಾರಿಗಳಾದ ವಿಠಲ ತೆಂಕುಬೈಲು ನಾರಾಯಣ ಗೌಡ ತೆಂಕುಬೈಲು ರಮೇಶ್ ಕಟ್ಟೆಮಜಲು ಅವರು ಉಪಸ್ಥಿತರಿದ್ದರು.