

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ.ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಸಹಯೋಗದಲ್ಲಿ ಫೆ.14ರಂದು ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಡಾ.ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಸಂತಾನೋತ್ಪತ್ತಿ ಔಷಧ ಕನ್ಸಲ್ಟೆಂಟ್ ಆಗಿರುವ ಡಾ.ಪ್ರಮೋದ ಲಕ್ಷ್ಮಣ್ ನೆರವೇರಿಸಿದರು.ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಮಾತನಾಡುತ್ತಾ, ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದಂತೆ ಹಾಗೂ ಡಿ.ಹರ್ಷೇಂದ್ರ ಕುಮಾರ್ ಇವರ ಸಹಕಾರದಲ್ಲಿ ಈ ಆಸ್ಪತ್ರೆಯು ಹಲವಾರು ಉಚಿತ ವೈದ್ಯಕೀಯ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಅವರು ಇರುವ ಜಾಗಕ್ಕೆ ಹೋಗಿ ಮಾಡುವ ಮೂಲಕ ಗ್ರಾಮೀಣ ಜನತೆಯ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿದೆ.
ನೂರಾರು ಉಚಿತ ಶಿಬಿರಗಳಿಂದ ಜನಮನ ಗೆದ್ದಿರುವ ನಮ್ಮ ಆಸ್ಪತ್ರೆ ಈ ದಿನ ವಿಶೇಷವಾಗಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಸ್ತ್ರೀರೋಗ ತಪಾಸಣೆ, ಬಂಜೆತನ ತಪಾಸಣೆ, ಮುಟ್ಟಿನ ಅಸ್ವಸ್ಥತೆಗಳು, ಮೂತ್ರನಾಳದ ಸೋಂಕು ತಪಾಸಣೆ, ಸ್ತನದ ತಪಾಸಣೆ, ಗರ್ಭಾಶಯದ ತಪಾಸಣೆ, ಮಹಿಳೆಯರ ಕ್ಯಾನ್ಸರ್ ಮುಂತಾದ ತಪಾಸಣೆಗಳನ್ನು ಉಚಿತವಾಗಿ ಮಾಡಲಾಯಿತು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಸ್ವರ್ಣಲತಾ, ಡಾ.ಪ್ರಿಯಾಂಕ, ಡಾ.ಅನ್ವಿತಾ, ಡಾ.ಕಮಲಾ ಭಟ್, ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಹಾಗೂ ಡಾ.ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಕೋ-ಆರ್ಡಿನೇಟರ್ ಡಾ.ಲಿಡ್ವಿನ್ ಉಪಸ್ಥಿತರಿದ್ದರು.125 ಮಂದಿ ಶಿಬಿರದ ಸದುಪಯೋಗ ಪಡೆದಕೊಂಡರು. ಜಗನ್ನಾಥ ಎಂ ಕಾರ್ಯಕ್ರಮ ನಡೆಸಿಕೊಟ್ಟರು.