ಲಾಯಿಲ ಗ್ರಾ.ಪಂ ದ್ವಿತೀಯ ಸುತ್ತಿನ ಗ್ರಾಮಸಭೆ

0

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷೆ ಜಯಂತಿ ಎಂ.ಕೆ ಅಧ್ಯಕ್ಷತೆಯಲ್ಲಿ ಫೆ.15 ರಂದು ಗ್ರಾಮ ಪಂಚಾಯತ್ ಭಾರತ್ ಮಾತಾ ಸಭಾಭವನ ವಠಾರದಲ್ಲಿ ನಡೆಯಿತು.

ಗ್ರಾಮ ಸಭೆಯ ‌ಮಾರ್ಗದರ್ಶಿ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ರತ್ನಾವತಿ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.

ಕಂದಾಯ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮೆಸ್ಕಾಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಇಂಜಿನಿಯರಿಂಗ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಂಗಧಿ ಜಗನ್ನಾಥ್, ಗ್ರಾ.ಪಂ ಸದ್ಯಸರಾದ ಪ್ರಸಾದ್ ಶೆಟ್ಟಿ, ಮೋಹನದಾಸ, ಜಯಂತಿ, ಬೆನೆಡಿಕ್ಟ ಸಲ್ಡಾನ, ಚಿದಾನಂದ ಶೆಟ್ಟಿ, ರಜನಿ ಎಮ್.ಆರ್, ಅರವಿಂದ್ ಕುಮಾರ್, ಗಣೇಶ್ ಆರ್, ದಿನೇಶ್ ಶೆಟ್ಟಿ, ಸವಿತಾ ಶೆಟ್ಟಿ, ಹರಿಕೃಷ್ಣ, ಸಾರಮ್ಮ, ಮರಿಯಮ್ಮ, ಮಹಮ್ಮದ್ ಸಲಿಂ, ಮಹೇಶ್ ಕೆ, ರೇವತಿ, ಹರೀಶ್ ಕುಲಾಲ್, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾ.ಪಂ ಪಿ.ಡಿ.ಓ ಶ್ರೀನಿವಾಸ್ ಸ್ವಾಗತಿಸಿದರು.ಗ್ರಾ.ಪಂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ವರದಿ ಮಂಡಿಸಿದರು.ಸಿಬ್ಬಂದಿಗಳು ಸಹಕರಿಸಿದರು‌.

LEAVE A REPLY

Please enter your comment!
Please enter your name here