ಅಳದಂಗಡಿ ಗ್ರಾಮಸಭೆ-2019ರಲ್ಲಿ ವೈಡ್ ಲೈಫ್ ನಿಂದ ಅನುಮತಿ ಸಿಕ್ಕಿದರೂ ವಿದ್ಯುತ್ ವಂಚಿತ ಮಾಳಿಗೆ ಮನೆಯ 30ಕುಟುಂಬಗಳು

0

ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಸರಸ್ವತಿ ಇವರ ಅಧ್ಯಕ್ಷತೆಯಲ್ಲಿ ಫೆ.15 ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಂಜಿತ್ ಕುಮಾರ್ ರವರು ಗ್ರಾಮ‌ಸಭೆಯನ್ನು ಮುನ್ನಡೆಸಿದರು.ಗ್ರಾಮ‌ಸಭೆಗೆ ಇಲಾಖೆಯ ಅಧಿಕಾರಿಗಳು ಗೈರಾಜರಾಗಿದ್ದೆ ವಿಶೇಷ.ಗ್ರಾಮ ಸಭೆಗೆ ಬಂದದ್ದು ಮೂರು ಇಲಾಖೆಯವರು ಮಾತ್ರ.ಗ್ರಾಮ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯತ್ ನಿಂದ ಅಧಿಕಾರಿಗಳಿಗೆ ಗ್ರಾಮ ಸಭೆಯ ಆಮಂತ್ರಣ ನೀಡಿದ್ದೇವೆ, ಶಿಸ್ತು ಕ್ರಮ ಕೈಗೊಳ್ಳಲು ನಮಗೆ ಬರುವುದಿಲ್ಲ ಎಂದು ನೋಡೇಲ್ ಅಧಿಕಾರಿ ತಿಳಿಸಿದರು.ಸುಲ್ಕೇರಿಮೊಗ್ರು ಗ್ರಾಮದಲ್ಲಿ ಮೂವತ್ತು ಕುಟುಂಬಗಳು ವಿದ್ಯುತ್ ಸಮಸ್ಯೆಯಿಂದ ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದಾರೆ.ವೈಡ್ ಲೈಪ್ ನಿಂದ ವಿದ್ಯುತ್ ಸಮಸ್ಯೆ ಬಗ್ಗೆ ಕ್ಲಿಯರೆನ್ಸ್ ಸಿಕ್ಕಿದೆ.ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದರೂ ಇಲ್ಲಿಗೆ ಇನ್ನೂ ವಿದ್ಯುತ್ ಸಿಗದಿರುವುದು ವಿಪರ್ಯಾಸ ಎಂದು ಸತೀಶ್ ಸುಲ್ಕೇರಿಮೊಗ್ರು ಹಾಗೂ ದೇವಿ ಪ್ರಸಾದ್ ಶೆಟ್ಟಿ ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಪಿಲ್ಯ ಗ್ರಾಮದಲ್ಲಿ ಕೆರೆ ಒತ್ತುವರಿ ಮಾಡಿದ್ದಾರೆ.ಅದರ ವಿರುದ್ದ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ನಾವು ಒತ್ತುವರಿ ಮಾಡುತ್ತೇವೆ.ಕುಡಿಯುವ ನೀರು ಸರಿಯಾಗಿ ಸರಬರಾಜು ಆಗದೆ ಗ್ರಾಮಸ್ಥರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಕೂಡಲೇ ನೀರಿನ‌ ಸೌಲಭ್ಯ ಒದಗಿಸಬೇಕೆಂದು ಶೀನ ಪಿಲ್ಯ ತಿಳಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಶಾಲಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಹಾಗೂ ಪಂಚಾಯತ್ ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.ಲೆಕ್ಕ ಸಹಾಯಕ ಪೂವಪ್ಪ ಮಲೆಕುಡಿಯ ಸ್ವಾಗತಿಸಿದರು.

p>

LEAVE A REPLY

Please enter your comment!
Please enter your name here