




ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿರಾಜ್ ಎಂ. ಚಿಲಿಂಬಿ ಆವರು ಕನ್ನಡ ಧ್ವಜವನ್ನು ಅರಳಿಸಿ ಶುಭ ಕೋರಿದರು. ಸಭಾ ಕಾರ್ಯಕ್ರಮದ ಮುಖ್ಯ ಶಿಕ್ಷಕ ಭಾಸ್ಕರ್ ಸ್ವಾಗತಿಸಿದರು. ಎಸ್.ಡಿ.ಎಂ.ಸಿ ಸದಸ್ಯರು, ಅಧ್ಯಾಪಕ ವೃಂದ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಭಾಷಣ, ಕನ್ನಡ ಗೀತೆಗಳು ಹಾಡುವ ಕಾರ್ಯಕ್ರಮ ಜರುಗಿತು. ಜಿಪಿಟಿ ಶಿಕ್ಷಕಿ ಶಶಿಕಲಾ ಕನ್ನಡ ರಾಜ್ಯೋತ್ಸವದ ವಿಚಾರವನ್ನು ತಿಳಿಸಿ ಜಿಪಿಟಿ ಶಿಕ್ಷಕ ಕಿರಣ್ ಎಸ್.ಪಿ. ನಿರೂಪಿಸಿ, ಸಹ ಶಿಕ್ಷಕಿ ಪ್ರಮೀಳಾ ವಂದಿಸಿದರು.









