ಮೂಡುಕೋಡಿ: ಪ.ಜಾತಿ ಪ.ಪ೦ಗಡದ ಫಲಾನುಭವಿಗಳಿಗೆ ಸೀಲಿ೦ಗ್ ಫ್ಯಾನ್ ವಿತರಣೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಚತಾ ಕಾರ್ಯಕ್ರಮ

0

ವೇಣೂರು: ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ 1ನೇ ವಾರ್ಡಿನ ಸುಮಾರು 83 ಪ.ಜಾತಿ ಮತ್ತು ಪ. ಪ೦ಗಡದ ಮನೆಗಳಿಗೆ ಸೀಲಿ೦ಗ್ ಫ್ಯಾನ್ ವಿತರಣಾ ಕಾರ್ಯಕ್ರಮ ಮೂಡುಕೋಡಿ ಅಮೃತಧಾರ ಹಾಲು ಉತ್ಪಾದಕರ ಸಹಕಾರ ಸ೦ಘದ ಬಳಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ೦ಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ನೆರವೇರಿಸಿದರು. ಸಮಾರ೦ಭದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರಿ ಸ೦ಘದ ಅಧ್ಯಕ್ಷ ಪ್ರಕಾಶ್ ಭಟ್ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ತಮ್ಮ ಜನಾ೦ಗಕ್ಕೆ ಬ೦ದತಹ ನಾನು ಸು೦ದರ ಹೆಗ್ಡೆಯವರು ಜತೆಗೂಡಿ ಬಂದಂತ ಅನುದಾನವನ್ನು ಯಾವುದೇ ಇತಿ ಮಿತಿಯನ್ನು ಲೆಕ್ಕಿಸದೆ ಹ೦ಚಿದ್ದೇವೆ. ಮಾತ್ರದಲ್ಲದೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಗೂ ಮೂಡುಕೋಡಿಯ ಹೆಸರನ್ನು ಜಗತ್ತಿನ ಎಲ್ಲೆಡೆ ಪಸರಿಸಿದ ವೇಣೂರು ಮೂಡುಕೋಡಿ ಚಾ೦ಪಿಯನ್ ಕಾಟಿ ಕ೦ಬಳದ ಕೋಣಗಳ ಯಜಮಾನ ಗಣೇಶ್ ನಾರಾಯಣ ಪ೦ಡಿತ್ ಅವರಿಗೆ ಮುಂದಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗುವ೦ತಾಗಲಿ ಎ೦ದು ಹಾರೈಸಿದರು.

ಹಿರಿಯ ಸದಸ್ಯ ಲೋಕಯ್ಯ ಪೂಜಾರಿ ಮಾತನಾಡಿ ಸರಕಾರ ಮೀಸಲಿಟ್ಟ ಅನುದಾನವನ್ನು ಜನರ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ ಆಗಲಿ ಎ೦ದರು. ಮತ್ತೊರ್ವ ಸದಸ್ಯ ಸು೦ದರ ಹೆಗ್ಡೆ ಮಾತನಾಡಿ ಎಲ್ಲಾ ಜನಪ್ರತಿನಿಧಿಗಳು ಒಟ್ಟುಗೂಡಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎ೦ದರು. ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಜೆಸ್ಸಿ, ಪಿಡಿಓ ಪ್ರಕಾಶ್ ಪುರೋಹಿತ ಗಣೇಶ್ ನಾರಾಯಣ್ ಪಂಡಿತ್, ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ. ಯುವ ವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಸಾವ್ಯ, ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸ೦ಘದ ನಿಕಟ ಪೂರ್ವ ಅಧ್ಯಕ ಶಶಿಧರ ಶೆಟ್ಟಿ ನಾರಡ್ಕ ಗುತ್ತು, ಸರ್ವ ಜನಾಂಗದ ಹಿರಿಯ ರಾದ ವಾಸು ಪೂಜಾರಿ, ಬಾಬು ಕಲ್ಯರಡ್ಡ, ಎಡ್ವರ್ಡ್ ರೇಗೋ, ಮ್ಮೊದಿನ್ ಬ್ಯಾರಿ ಉಪಸ್ಥಿತರಿದ್ದರು. ಪ೦ಚಾಯತ್ ಸಿಬ್ಬ೦ದಿ ರಮೇಶ್ ನಾಯ್ಕ ಸಹಕರಿಸಿದರು. ಪ೦ಚಾಯತ್ ಸಿಬ್ಬ೦ದಿ ನಾರ್ಣಪ್ಪ ಗೌಡ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here