ಬೆಳ್ತಂಗಡಿ: ಕುವೆಂಪು ಅವರು ಮಾನವ ಪ್ರೇಮವನ್ನು ಜಗತ್ತಿಗೆ ಸಾರಿ ಜನರಲ್ಲಿ ವೈಚಾರಿಕತೆಯನ್ನು ಮೂಡಿಸಿದ ಮಹಾನ್ ಕವಿಯಾಗಿದ್ದಾರೆ ಎಂದು ವಾಣಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಬೆಳಿಯಪ್ಪ ಕೆ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯುಗದ ಕವಿ, ಜಗದ ಕವಿ ಎನಿಸಿಕೊಂಡ ಕುವೆಂಪು ನವೋದಯ ಸಾಹಿತ್ಯ ಪರಂಪರೆಯಲ್ಲಿ ಕೃಷಿ ಮಾಡಿದವರು. ಮಾನವ ಜಾತಿ ಮತ ವಿಕಾರಗಳಿಂದ ದೂರವಿರಬೇಕು.
ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಿ ಆರಾಧಿಸಬೇಕು. ಇದರಿಂದ ಮಾನವ ಕುಲದ ಉಳಿಯುವಿಕೆ ಸಾಧ್ಯ.ವಿಶ್ವಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಮೂಲಕ ಕುವೆಂಪು ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು.
ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ ಉಪಸ್ಥಿತರಿದ್ದರು.ಕಾಲೇಜಿನ ಕನ್ನಡ ಸಂಘದ ಸಹಸಂಯೋಜಕ ವಿನೀಶ್ ಕೆ ಸ್ವಾಗತಿಸಿದರು.ನಿಶಾ ಧನ್ಯವಾದ ಸಲ್ಲಿಸಿದರು.ಸನುಷಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.
p>