


ಗೇರುಕಟ್ಟೆ: ಶ್ರೀ ದುರ್ಗಾ ಟ್ರೇಡರ್ಸ್ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಅ.24ರಂದು ಶುಭಾರಂಭಗೊಂಡಿದೆ. ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ನಿರ್ದೇಶಕ ಹರಿದಾಸ ಪಡಂತ್ತಾಯ ದೀಪ ಪ್ರಜ್ವಲನೆ ಮಾಡಿದರು.
ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿ, ಉದ್ಯಮ ಯಶಸ್ವಿಯಾಗಲಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘವು ಸಹಕಾರ ನೀಡುವುದು ಹಾಗೂ ಕೃಷಿಕರ ಉತ್ಪನ್ನಗಳಿಗೆ ಉತ್ತಮ ದರ ನೀಡುವ ಮೂಲಕ ವ್ಯಾಪಾರ ವಹಿವಾಟು ಅಭಿವೃದ್ಧಿ ಹೊಂದಲು ಅವಕಾಶ ಇದೆ ಎಂದು ಹೇಳಿದರು.



ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ, ನಿರ್ದೇಶಕ ಶೇಖರ ನಾಯ್ಕ, ಕುವೆಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಮೈರಳ್ಕೆ ಕಿರಾತಮೂರ್ತಿ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ, ಕೆ., ನಾಳ ದೇವಸ್ಥಾನದ ಅಧ್ಯಕ್ಷ ಹರೀಶ್ ಕುಮಾರ್ ಬಿ., ಹಿರಿಯರಾದ ಪೂವಪ್ಪ ಶೆಟ್ಟಿ, ಶಾರದ ಉಮನಾಥ್ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಬೆಳ್ತಂಗಡಿ ಸುಮುಖ ಟ್ರೇಡರ್ಸ್ ಮಾಲಕ ಸದಾನಂದ ಶೆಟ್ಟಿ, ಆಕ್ಷಯ ಎಲೆಕ್ಟ್ರಿಕಲ್ ಮಾಲೀಕರ ಪುರಂದರ ಶೆಟ್ಟಿ, ಉದ್ಯಮಿ ಸಂತೋಷ್ ಶೆಟ್ಟಿ, ಹಿರಿಯರಾದ ಬಾಬು ಶೆಟ್ಟಿ, ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ರಾಜಶೇಖರ ಶೆಟ್ಟಿ ಭಂಡಾರಿ ಗುಡ್ಡೆ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕಣಾಧಿಕಾರಿ ಕವಿತಾ ಶೆಟ್ಟಿ, ಸಿಬ್ಬಂದಿಗಳು, ಸ್ಥಳೀಯ ವರ್ತಕರು ಹಾಗೂ ಸಿಬ್ಬಂದಿಗಳು ಸಂಸ್ಥೆಯ ಪಾಲುದಾರರ ಕುಟುಂಬಸ್ಥರು ಮತ್ತಿತರರಿದ್ದರು.
ಸಂಸ್ಥೆ ಪಾಲುದಾರರಾದ ಪ್ರಶಾಂತ್ ಶೆಟ್ಟಿ ಸಂಬೊಳ್ಯ ಹಾಗೂ ರಾಜೇಶ್ ಶೆಟ್ಟಿ ಉಳಗುಡ್ಡೆ ಸತ್ಕರಿಸಿ, ಕೃಷಿಕರ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಖರೀದಿಸುವುದಾಗಿ ಹೇಳಿ, ಕೃಷಿಕರ ಸಹಕಾರ ಯಾಚಿಸಿದರು. ಅಂಚೆ ಇಲಾಖೆ ನಿವೃತ್ತ ಅಂಚೆ ಪಾಲಕ ವಿಠ್ಠಲ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ, ನಿರೂಪಿಸಿದರು.










