


ನಾವೂರು: ಅ.24ರಂದು ಪೂರ್ವಾಹ್ನ 9.30ಗಂಟೆಗೆ ಸರಿಯಾಗಿ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಾವೂರು ಗ್ರಾಮ ಪಂಚಾಯತ್, ಬೆಳ್ತಂಗಡಿ ಪಶುಸಂಗೋಪನೆ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ ಜಂಟಿ ಆಶ್ರಯದಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಮಮತ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸದ್ರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಸದಸ್ಯರಾದ ಗಣೇಶ್ ಗೌಡ, ವೇದಾವತಿ, ಎನ್. ಕೆ. ಹಸೈನಾರ್, ಪಶುವೈದ್ಯಾಧಿಕಾರಿ ರಾಜ ವರ್ಮ, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ವರ್ಗ, ನಡ ಮತ್ತು ನಾವೂರಿನ ಪಶು ಸಖಿಯರು, ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಧರು ಉಪಸ್ಧಿತರಿದ್ದರು. ಗ್ರಾಮದ ಸುಮಾರು 250ಕ್ಕಿಂತಲೂ ಹೆಚ್ಚು ಸಾಕು ನಾಯಿಗಳಿಗೆ ರೋಗ ನಿರೋದಕ ಲಸಿಕೆ ಹಾಕಲಾಯಿತು.










