ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ

0

ಪಿಲ್ಯ: ಚ್ಯೆಲ್ಡ್ ಆಂಗ್ಲ ಮಾಧ್ಯಮ ಶಾಲೆ ಪಿಲ್ಯದಲ್ಲಿ ಡಿ.21ರಂದು ಆಟೋಟ ಸ್ಪರ್ಧೆ ಹಾಗೂ ಡಿ.23 ರಂದು ವಿವಿಧ ಸಾಂಸ್ರ್ಕತಿಕ ಕಾರ್ಯಕ್ರಮಗಳು ಬಹಳ ವಿಜ್ರಂಭಣೆಯಿಂದ ಜರಗಿತು.

ಶಿಕ್ಷಕ ರಕ್ಷಕ ಸಂಗದ ಅಧ್ಯಕ್ಷ ಶಾಜಿ ಕೆ ಕುರಿಯನ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.ಮಕ್ಕಳ ಪಥಸಂಚಲನ ನಡೆಯಿತು.ಸಂಚಾಲಕ ನಸೀರ್ ಅಹಮದ್ ಖಾನ್, ಹರಿಣಾಕ್ಷಿ ಲತಿಶ್, ವಿರೇಂದ್ರ ಜೈನ್, ಧನಕೀರ್ತಿ ಜೈನ್ ಹಾಗೂ ಪೋಷಕರು ಉಪಸ್ಥಿತರಿದ್ದರು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ವಿಜಯ್ ಕುಮಾರ್ ಜೈನ್ ರವರು ಬಿಡುವಿನ ಸಮಯದಲ್ಲಿ ಮನರಂಜನೆ ಕಾರ್ಯಕ್ರಮ ನೀಡಿ ರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕ ನಸೀರ್ ಅಹಮದ್ ಖಾನ್ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಶಿಕ್ಷಣ ಸಂಯೋಜಕ ರಾದ ಕಿರಣ್ ಕುಮಾರ್, ಉದ್ಯಮಿ ನಾಗ್ ಕುಮಾರ್ ಜೈನ್, ಸುಧೀರ್ ಕೆ.ಯಸ್ ಸುಲ್ಕೇರಿ, ನವೀನ್ ನಾವರ, ನಿತ್ಯಾನಂದ ನಾವರ, ಶಾಜಿ ಕೆ ಕುರಿಯನ್, ಧನಕೀರ್ತಿ ಜ್ಯೆನ್ ಉಪಸ್ಥಿತರಿದ್ದರು.

ಶಿಕ್ಷಕಿ ಕಾವ್ಯಶ್ರೀ ಸ್ವಾಗತಿಸಿದರು.ಮುಖ್ಯ ಶಿಕ್ಷಕಿ ನಿರ್ಮಲ ಪ್ರಸ್ತಾಪಿಸಿದರು.ಆಟೋಟ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಅತಿಥಿಗಳು ಸಂದರ್ಭೋಚಿತರಾಗಿ ಮಾತಾಡಿ ಮಕ್ಕಳಿಗೆ ಶುಭ ನುಡಿದರು.ಅಧ್ಯಕ್ಷ ನಸೀರ್ ಅಹಮದ್ ಖಾನ್ ಮಾತನಾಡಿ ಮಕ್ಕಳ ಚಟುವಟಿಗಳ ಬಗ್ಗೆ ಹಾಗೂ ಶಿಕ್ಷಕರ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಸಿ.ಎ ಯಲ್ಲಿ ಉತ್ತಮ ಅಂಕದಲ್ಲಿ ಉತ್ತೀರ್ಣರಾಗಿ ಉದ್ಯೋಗದಲ್ಲಿರುವ ಕುಮಾರಿ ನಿರೀಕ್ಷ ನಿತ್ಯಾನಂದ ನಾವರ ಳನ್ನು ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಸಹಾಯ ನೀಡಿದವರನ್ನು, ಶಾಲೆಗೆ ಕಂಪ್ಯೂಟರ್ ನೀಡಿದ ಶಾಜಿ ಕೆ ಕುರಿಯನ್ ರವರನ್ನು, ಸಹಕಾರ ನೀಡಿದ ಭಾರತ್ ಆಟೊ ಪ್ರದೀಪ್ ಕುಮಾರ್ ಶೆಟ್ಟಿಯವರನ್ನೂ, ಸದಾ ನಮ್ಮೊಂದಿಗೆ ಇರುವ ಆಮಂತ್ರಣ ವಿಜಯ್ ಕುಮಾರ್ ಜೈನ್ ರವರನ್ನು ಸನ್ಮಾನಿಸಲಾಯಿತು.ಶಿಕ್ಷಕಿ ಲಕ್ಷ್ಮೀ ನಿರೂಪಿಸಿದರು.ಶಿಕ್ಷಕಿ ಸೌಜನ್ಯ ವಂದಿಸಿದರು.

LEAVE A REPLY

Please enter your comment!
Please enter your name here