

ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆ ಪಿಲ್ಯದಲ್ಲಿ ಡಿ.26 ರಂದು ಶಿಕ್ಷಕರಿಗೆ ಗೌರವಿಸುವ ಕಾರ್ಯಕ್ರಮ ನಡೆಯಿತು.
ವೇಣೂರು ಆರಕ್ಷಕ ಠಾಣಾ ಉಪ ನಿರೀಕ್ಷಕರಾದ ಶೈಲ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಸಂಚಾಲಕ ನಸೀರ್ ಅಹಮದ್ ಖಾನ್ ರವರು ವಹಿಸಿದ್ದರು.ಅತಿಥಿಯಾಗಿ ಶಿಕ್ಷಣ ಸಂಯೋಜಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.ಶಿಕ್ಷಕ ರಕ್ಷಕ ಸಂಗದ ಅಧ್ಯಕ್ಷ ಶಾಜಿ ಕೆ ಕುರಿಯನ್, ಉಪಾಧ್ಯಕ್ಷೆ ಹರಿಣಾಕ್ಷಿ ಲತೀಶ್, ಧನಕೀರ್ತಿ ಜೈನ್ ಭಾಗವಹಿಸಿದ್ದರು.ವೀರೇಂದ್ರ ಕುಮಾರ್ ಜೈನ್ ಸ್ವಾಗತಿಸಿದರು.ಎಲ್ಲಾ ಶಿಕ್ಷಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕಳೆದ ಶ್ಯೆಕ್ಷಣಿಕ ವರ್ಷದ 10ನೇ ತರಗತಿಯಲ್ಲಿ 100 ಶೇ ಫಲಿತಾಂಶ ನೀಡಿದ ಮಕ್ಕಳನ್ನು ಗೌರವಿಸಲಾಯಿತು.ಆರಕ್ಷಕ ಉಪ ನಿರೀಕ್ಷರನ್ನು ಹಾಗೂ ಶಿಕ್ಷಣ ಸಂಯೋಜಕ ಕಿರಣ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಠಾಣಾಧಿಕಾರಿ ಶಾಲಾ ಮಕ್ಕಳಿಗೆ ಜೀವನದಲ್ಲಿ ಒಳ್ಳೆಯ ಗುಣ ಅಳವಡಿಸುವಂತೆ ಕಾನೂನಾತ್ಮಕ ಅರಿವು ಮೂಡಿಸಿದರು.ಈಗಿನ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು.
ಕಿರಣ್ ಕುಮಾರ್ ಮಾತನಾಡಿ ಶಾಲಾ ಕಾರ್ಯಕ್ರಮ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ವಿದ್ಯೆ ಬಗ್ಗೆ ಗಮನ ಕೊಟ್ಟು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪ್ರತಿಸಲದಂತೆ 100 ಶೇ ಫಲಿತಾಂಶ ಬರುವಂತೆ ಹೆಚ್ಚು ಗಮನ ಹರಿಸಿ ಎಂದು ಶುಭ ಕೋರಿದರು.
ಶಾಜಿ ಕುರಿಯನ್ ಹಿತನುಡಿದರು.ಅಧ್ಯಕ್ಷ ನಸೀರ್ ಆಹಮದ್ ಖಾನ್ ಮಾತನಾಡಿ ಮೆಚ್ಚುಗೆ ವ್ಯಕ್ತ ಪಡಿಸಿ ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವಂತೆ ಮಕ್ಕಳಲ್ಲಿ ಹುರುಪು ಮೂಡಿಸಿ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಹರಿಣಾಕ್ಷಿ ಯವರು ವಂದಿಸಿದರು.