ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜೆಸ್ವಿನ್ ಪಾಲಾಟಿ: ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ನಿಂದ ಗೌರವ

0

ಬೆಳ್ತಂಗಡಿ: ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸೈಂಟ್ ಸಾವಿಯೋ ಶಾಲೆಯ ವಿದ್ಯಾರ್ಥಿ ಜೆಸ್ವಿನ್ ಪಾಲಾಟಿ ಅವರನ್ನು ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ (CBK) ತಂಡದಿಂದ ಅ.25ರಂದು ಅವರ ಮನೆಗೆ ಭೇಟಿ ನೀಡಿ ಗೌರವಿಸಲಾಯಿತು.

ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ CBK ಅಧ್ಯಕ್ಷ ಅಗಸ್ಟೀನ್ ಅವರು CBK ಪರವಾಗಿ ಜೆಸ್ವಿನ್ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿ.ಟಿ., ಕಾರ್ಯದರ್ಶಿ ಶಿಜೋ ಜೋಸೆಫ್, ಉಪಾಧ್ಯಕ್ಷ ಮ್ಯಾಥ್ಯೂ ವಿ.ಟಿ., ಕೋಶಾಧಿಕಾರಿ ರಂಜಿತ್ ಪಿ.ಎಸ್., ಗೌರವ ಸಲಹೆಗಾರ ಜೋಸೆಫ್ ಕೆ.ಡಿ., ಕಾರ್ಯಕಾರಿಣಿ ಸದಸ್ಯರು ಶಾಜಿ ತೋಮಸ್, ಜೈಸನ್ ಪಟ್ಟೇರಿಲ್, ಲಿಜೋ ಚಾಕೋ ಹಾಗೂ ಸಂಘಟನೆಯ ಇತರ ಸದಸ್ಯರು ಉಪಸ್ಥಿತರಿದ್ದರು.

ಜೆಸ್ವಿನ್ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂಬರುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಯಶಸ್ಸು ತಮ್ಮದಾಗಲಿ ಎಂದು ಸಿಬಿಕೆ ಸದಸ್ಯರು ಶುಭಹಾರೈಸಿದರು.

LEAVE A REPLY

Please enter your comment!
Please enter your name here