ವೇಣೂರು: ಶತನಮನ ಶತಸನ್ಮಾನ ಕಾರ್ಯಕ್ರಮ- ಶಿರಾಡಿಪಾಲರ ಆದರ್ಶ ವಿದ್ಯಾರ್ಥಿಗಳಿಗೆ ಅನುಕರಣೀಯ: ರೊ.ಪ್ರವೀಣ್ ಚಂದ್ರ

0

ವೇಣೂರು: ತಮ್ಮ ಜೀವಿತಾವಧಿಯಲ್ಲಿ ಸರ್ವಾಂಗೀಣ ಸಾಧನೆಯ ಮೂಲಕ ಉತ್ತುಂಗಕ್ಕೇರಿದ್ದ ಕೆ.ಎನ್.ಭಟ್ ಶಿರಾಡಿಪಾಲರ ಜೀವನದ ಆದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮತ್ತು ಅನುಕರಣೀಯವಾಗಿದೆ ಎಂದು ಮೂಡುಬಿದಿರೆ ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ರೊ. ಪ್ರವೀಣ್ ಚಂದ್ರ ಅವರು ನುಡಿದರು.

ಕೆ.ಎನ್.ಭಟ್ ಶಿರಾಡಿಪಾಲ್ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಶತನಮನ ಶತಸನ್ಮಾನ ಸರಣಿಯ 43 ಮತ್ತು 44ನೆಯ ಸನ್ಮಾನಗಳನ್ನು ವೇಣೂರು ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಿದ್ದ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮೂಡುಬಿದಿರೆ ರೋಟರಿ ಕ್ಲಬ್ ಹೆಣ್ಣು ಮಕ್ಕಳಿರುವ ನೂರಾರು ಬಡ ಕುಟುಂಬಗಳಿಗೆ ಉಚಿತ ಶೌಚಾಲಯಗಳನ್ನು ಪೂರೈಸಿದ್ದು, ವೇಣೂರು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡಕ್ಕೆ ಅಗತ್ಯವಿರುವ ಶೌಚಾಲಯವನ್ನು ಆಧ್ಯತೆಯ ಮೇಲೆ ಪೂರೈಸಲು ರೋಟರಿ ಚಾರಿಟೇಬಲ್ ಟ್ರಸ್ಟ್ ಗೆ ಶಿಫಾರಸು ಮಾಡುವ ಭರವಸೆಯಿತ್ತರು.

ಶತನಮನ ಶತಸನ್ಮಾನ ಕಾರ್ಯಕ್ರಮದ ಗೌರವ ಸಲಹೆಗಾರ ಕೆ.ಶ್ರೀಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸರಣಿಯ 43ನೇ ಸನ್ಮಾನವನ್ನು ನಿವೃತ್ತ ಹಿರಿಯ ದ್ವಿಭಾಷಾ ಶಿಕ್ಷಕ, ಇಳಿ ವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿರುವ ಕರ್ಪೆ ನಾರಾಯಣ ನಾಯಕ್ ಹಾಗೂ 44ನೆಯ ಸನ್ಮಾನವನ್ನು ಶಿರಾಡಿಪಾಲರ ಕುಟುಂಬದ ಆತ್ಮೀಯ, ವೇಣೂರು ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ವೆಂಕಟೇಶ ತುಳುಪುಳೆ ಅವರಿಗೆ ನೀಡಿ ಗೌರವಿಸಲಾಯಿತು. ಕೆ.ಎನ್. ಭಟ್ ಶಿರಾಡಿಪಾಲರ ಅಳಿಯ ನಿವೃತ್ತ ಮೆಸ್ಕಾಂ ಇಂಜಿನಿಯರ್ ಮುರಾರಿ ಚಿಪ್ಳೂಣಕರ್, ಪತ್ರಕರ್ತ ಹರೀಶ್ ಕೆ. ಆದೂರು ಉಪಸ್ಥಿತರಿದ್ದರು.

ಶಾಲಾ ಸಂಗೀತ ಶಿಕ್ಷಕಿ ಅನಸೂಯ ಪಾಠಕ್ ಪ್ರಾರ್ಥನೆ ನೆರವೇರಿಸಿದರು.ಕನ್ನಡ ಅಧ್ಯಾಪಕ ಕರ್ಪೆ ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.ಶತನಮನ ಶತಸನ್ಮಾನ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಶಿಕ್ಷಕಿ ಸಂಧ್ಯಾ ಜೈನ್ ವಂದಿಸಿದರು.

p>

LEAVE A REPLY

Please enter your comment!
Please enter your name here