ರಾಜ್ಯ ಕೇಂದ್ರದಲ್ಲಿ ಅಕ್ಟೋಬರ್ 30ರಿಂದ ಅನಿರ್ಧಿಷ್ಟ ಹೋರಾಟ- ನವೆಂಬರ್ 7: ದ.ಕ.ಜಿಲ್ಲೆ ಬಿಸಿಯೂಟ ಬಂದ್

0

ಬೆಳ್ತಂಗಡಿ: ಕರ್ನಾಟಕ ರಾಜ್ಯದ ಅಕ್ಷರ ದಾಸೋಹ ನೌಕರರು ಅಕ್ಟೋಬರ್ 30 ರಿಂದ ಬೆಂಗಳೂರಲ್ಲಿ ಅನಿರ್ಧಿಷ್ಟ ಕಾಲ ಬೇಡಿಕೆ ಈಡೇರುವ ವರೆಗೆ ಹೋರಾಟ ನಡೆಸಲಿದ್ದಾರೆ ಎಂದು ಸಂಘದ ಬೆಳ್ತಂಗಡಿ ತಾಲೂಕು ಅದ್ಯಕ್ಷೆ ಬಾಲಕಿ, ಕಾರ್ಯದರ್ಶಿ ಜಾನಕಿ, ಖಜಾಂಜಿ ದೇವಕಿ ಹಾಗೂ ಸಲಹೆಗಾರ ಕಾರ್ಮಿಕ ಮುಖಂಡ ಬಿ.ಎಂ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಸಭೆ ನಡೆಸಿ ಈ ಹೇಳಿಕೆಯನ್ನು ನೀಡಿದ್ದಾರೆ.ಅಕ್ಟೋಬರ್ 30 ರಿಂದ ಒಂದೊಂದೇ ಜಿಲ್ಲೆ ಬಿಸಿಯೂಟ ಬಂದ್ ಮಾಡುತ್ತಾ ನವಂಬರ್ 7 ರಂದು ದ.ಕ., ಉಡುಪಿ ಮತ್ತು ಉ.ಕ. ಜಿಲ್ಲೆಯ ಬಿಸಿಯೂಟ ಬಂದ್ ಮಾಡಿ ಬೆಂಗಳೂರಿನ ಹೋರಾಟದಲ್ಲಿ ನಾವು ಇಲ್ಲಿಂದ ಭಾಗವಹಿಸಲಿದ್ದೇವೆ ಎಂದವರು ತಿಳಿಸಿದರು.

ಅಕ್ಷರದಾಸೋಹ ಯೋಜನೆ ಶಿಕ್ಷಣ ಇಲಾಖೆಯಲ್ಲಿ ನಡೆಯಬೇಕು, ಸಾದ್ವಿಲಾರು ಜಂಟಿ ಖಾತೆ ಬದಲಾವಣೆ ಹಿಂಪಡೆಯಬೇಕು, 2022 ರಲ್ಲಿ 60 ವರ್ಷ ಆಗಿದೆ ಎಂದು ಕೆಲಸದಿಂದ ತೆಗೆದ ಎಲ್ಲರಿಗೂ ತಲಾ 1 ಲಕ್ಷರೂ ಪರಿಹಾರ ನೀಡಬೇಕು, ನಿವೃತ್ತಿ ವೇತನ ನಿವೃತಿ ಫಂಡು ಜಾರಿಗೆ ಬರಬೇಕು, ಬಜೆಟಲ್ಲಿ ನಮಗೆ ರೂ.1,000 ಏರಿಕೆ ಮಾಡಿದ್ದನ್ನು ಜನವರಿ 2023ರಕ್ಕೆ ಅನ್ವಯಿಸಿ ಜಾರಿ ಮಾಡಬೇಕು, ನಮಗೆ ನೀಡಿದ ಗ್ಯಾರೆಂಟಿ ವೇತನವನ್ನು ತಕ್ಷಣ ಜಾರಿಮಾಡಬೇಕು, ಕೆಲಸದ ಸ್ಥಳದಲ್ಲಿ ಸತ್ತರೆ ರೂ, 25 ಲಕ್ಷ ಪರಿಹಾರ ನೀಡಬೇಕು, ವರ್ಷದ ಕೊನೆ ಮಾರ್ಚು 31 ನ್ನು ಎಪ್ರೀಲ್ 10 ಕ್ಕೆ ವಿಸ್ತರಿಸಬೇಕು, ಮಕ್ಕಳ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು, ಬಿಸಿಯೂಟ ಯೋಜನೆಯನ್ನು ಖಾಯಂಗೊಳಿಸಬೇಕು ಹಾಗೂ ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗೀ ಸಂಸ್ಥೆಗೆ ವಹಿಸಬಾರದು, ನಮ್ಮನ್ನು ಶಾಲೆಗಳ ಡಿ ಗ್ರೂಪು ನೌಕರರೆಂದು ಪರಿಗಣಿಸಬೇಕು, ಬೇಸಿಗೆ ಮತ್ತು ದಸರಾ ರಜೆಯ ವೇತನ ನಮಗೂ ನೀಡಬೇಕು, ಪ್ರತಿ ಶಾಲೆಯಲ್ಲೂ ಕನಿಷ್ಟ 2 ಜನ ಅಡುಗೆಯವರು ಕಡ್ಡಾಯ ಇರಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಸಲು ನಾವು ಸರಕಾರವನ್ನು ಒತ್ತಾಯಿಸಿ ಈ ಹೋರಾಟ ನಡೆಸುತ್ತಿzವೆ ಎಂದವರು ಹೇಳಿದರು.ಒಂದು ವೇಳೆ ನವಂಬರ್ 10ರ ಒಳಗೆ ನಮಗೆ ನ್ಯಾಯ ಒದಗಿಸದಿದ್ದರೆ ನಂತರ ರಾಜ್ಯಾದಾದ್ಯಂತ ಅನಿರ್ದಿಷ್ಟ ಬಿಸಿಯೂಟ ಬಂದ್ ನಡೆಸಲಿದ್ದೇವೆ ಎಂದವರುಗಳು ತಿಳಿಸಿದ್ದಾರೆ.

ಈ ಸಂದರ್ಭ ನಡೆದ ತಾಲೂಕು ಸಮಿತಿ ಸಭೆಯಲ್ಲಿ ಸಿಐಟಿಯು ನಾಯಕಿ ಈಶ್ವರಿ, ಸಂಘದ ಉಪಾದ್ಯಕ್ಷೆ ಶ್ಯಾಮಲ, ಸಹಕಾರ್ಯದರ್ಶಿ ಸುಂದರಿ ಮೊದಲಾದವರು ಉಪಸ್ತಿತರಿದ್ದರು.

p>

LEAVE A REPLY

Please enter your comment!
Please enter your name here