ತಾಲೂಕು ಮಟ್ಟದ ಕ್ರೀಡಾಕೂಟ-ಮರಿಯಾಂಬಿಕಾ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಸ.ಉ.ಹಿ.ಪ್ರಾ.ಶಾಲೆ, ಬಜಿರೆ ಇಲ್ಲಿ ಅ.27ರಂದು ನಡೆದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಅಲೋನ ಫ್ರಾನ್ಸಿಸ್ 9 ನೇ ತರಗತಿ ಗುಂಡು ಎಸೆತ ಹಾಗೂ ಹ್ಯಾಮರ್ ಎಸೆತ ದಲ್ಲಿ ಪ್ರಥಮ ಸ್ಥಾನ ಹಾಗೆಯೇ 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಹೇಮಂತ್ 8 ನೇ ತರಗತಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತರುಣ್ 8ನೇ ತರಗತಿ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಹಾಗೂ ಪ್ರಾಥಮಿಕ ವಿಭಾಗದಲ್ಲಿ ಮೊಹಮ್ಮದ್ ಹರ್ಷ ಏಳನೇ ತರಗತಿ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕಿಶನ್ ರಾಜ್ ರೈ ಇವರು ತರಬೇತಿಯನ್ನು ನೀಡಿರುತ್ತಾರೆ.ಇವರಿಗೆ ಶಾಲೆಯ ಸಂಚಾಲಕರಾಗಿರುವ ವಂದನೀಯ ಫಾ.ಸೆಬಾಸ್ಟಿಯನ್ ಹಾಗೂ ಮುಖ್ಯ ಶಿಕ್ಷಕಿ ವಂದನೀಯ ಸಿ. ಶೆರಿನ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here