


ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ನಿರೀಕ್ಷಣಾ ಮಂದಿರವನ್ನು ಶಾಸಕ ಹರೀಶ್ ಪೂಂಜ ಉದ್ಘಾಟನೆ ಮಾಡಿದ್ದಾರೆ. ವಿಐಪಿ, ವಿವಿಐಪಿ ವಿಶ್ರಾಂತಿ ಕೊಠಡಿಗಳನ್ನು ಹೊಂದಿರುವ, ವಿಶೇಷ ಮೀಟಿಂಗ್ ಹಾಲ್ ಗಳನ್ನು ಹೊಂದಿರುವ ನಿರೀಕ್ಷಣಾ ಮಂದಿರಾ ಇದಾಗಿದೆ.
ಎರಡನೇ ಹಂತದ ಟೆಂಡರ್ ನಲ್ಲಿ ಇನ್ನೂ ಕೆಲ ಕಾಮಗಾರಿಗಳು ಪ್ರಗತಿಯಲ್ಲಿದೆ. ಉತ್ತಮ ಪಾರ್ಕಿಂಗ್ ವ್ಯವಸ್ಥೆಯುಳ್ಳ ನಿರೀಕ್ಷಣಾ ಮಂದಿರ ಹೊಸ ಲುಕ್ ನಿಂದ ಕಂಗೊಳಿಸುತ್ತಿದೆ.

ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಣೆ
ಹುಲ್ಲು ಕತ್ತರಿಸುವ ಯಂತ್ರದ ವಿತರಣೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಅರ್ಹ ಫಲಾನುಭವಿಗಳಿಗೆ ಇಂದು ದ್ವಿಚಕ್ರವಾಹನ ವಿತರಿಸಲಾಯಿತು. ಇದೇ ವೇಳೆ ಕುದುರೆಮುಖ ಕಬ್ಬಿಣದ ಅದಿರುವ ಕಂಪೆನಿ ಲಿಮಿಟೆಡ್ ಮಂಗಳೂರು ಇದರ ವತಿಯಿಂದ ಅರ್ಹ 16 ಜನ ಬುಡಕಟ್ಟು ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ಹುಲ್ಲು ಕತ್ತರಿಸುವ ಯಂತ್ರವನ್ನು ವಿತರಿಸಲಾಯಿತು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ.ಪಂ. ಉಪಾಧ್ಯಕ್ಷ ಜಯಾನಂದ್, ಮತ್ತಿತರರು ಉಪಸ್ಥಿತರಿದ್ದರು.