ಬೆಳ್ತಂಗಡಿ : ಜೀವನೋಪಾಯ ಅಭಿವೃದ್ಧಿ ತರಬೇತಿ

0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ್ ಅಧ್ಯಕ್ಷತೆಯಲ್ಲಿ “ಜೀವನೋಪಾಯ ಅಭಿವೃದ್ಧಿ ಕುರಿತಾದ ತರಬೇತಿ‌” ಕಾರ್ಯಕ್ರಮ ಮಾ.27 ರಂದು ನಡೆಯಿತು.

ಈ ಸಂದರ್ಭದಲ್ಲಿ ಶ್ರೀಲಕ್ಮೀ ಉತ್ಪಾದಕರ ಗುಂಪಿನ ಸದಸ್ಯರು ಉತ್ಪಾದಿಸಿದ ಸಮೃದ್ದ ಆರೋಗ್ಯಕ್ಕಾಗಿ ಸಾವಯವ ಅಕ್ಕಿ ಎಂಬ ಶೀರ್ಷಿಕೆಯೊಂದಿಗೆ ಸಾವಯವ ಶ್ರೀಲಕ್ಮೀ ಕಜೆ ಅಕ್ಕಿ ಯನ್ನು ಕಾರ್ಯನಿರ್ವಾಹಕ ಅಧಿಕಾರಿಯವರು ಮಾರುಕಟ್ಟೆಗೆ ಬಿಡುಗಡೆ ಮಾಡಿ ಉತ್ಪಾದಕ ಗುಂಪಿನ‌ ಸದಸ್ಯರಿಗೆ ಶುಭಹಾರೈಸಿದರು. ತಾಲೂಕು ಪಂಚಾಯತ್ ನ ವ್ಯವಸ್ಥಾಪಕರು, ಲೆಕ್ಕಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು, ಉತ್ಪಾದಕ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
ನಂತರದಲ್ಲಿ ಉತ್ತಮ ಸಾಧನೆಗಾಗಿ ರಾಜ್ಯಮಟ್ಟದ ತಾಲೂಕು ಎಂಐಎಸ್ ಸಿಬ್ಬಂದಿ ಪ್ರಶಸ್ತಿಯನ್ನು ಸ್ವೀಕರಿಸಿದ ನಿತೀಶ್ ಹಾಗೂ ನಬಾರ್ಡ್ ಪ್ರಶಸ್ತಿಯನ್ನು ಪಡೆದ ಶ್ರೀಮತಿ ಉಷಾಕಾಮತ್ ಇವರನ್ನು ಸನ್ಮಾನಿಸಲಾಯಿತು.

ಜೀವನೋಪಾಯ ತರಬೇತಿಗೆ ಪೂರಕವಾಗಿ ಕಾರ್ಯನಿರ್ವಾಹಕ ಅಧಿಕಾರಿಯವರು ಮಾತನಾಡಿ ಜೀವನೋಪಾಯ ಚಟುವಟಿಕೆಯನ್ನು‌ ಕೈಗೊಳ್ಳಲು ಇರುವ ಅವಕಾಶಗಳು ಹಾಗೂ ಅದನ್ನು ಯಾವ ರೀತಿ‌ ಸದುಪಯೋಗ‌ ಪಡಿಸಿಕೊಳ್ಳಬೇಕು ಮತ್ತು ಮಾರುಕಟ್ಟೆ ಅವಕಾಶಗಳ ಕುರಿತಂತೆ ಮಾಹಿತಿಯನ್ನು ನೀಡಿದರು. ನಂತರದಲ್ಲಿ ಪ್ರಸ್ತುತ ಒಕ್ಕೂಟ ವ್ಯಾಪ್ತಿಯಲ್ಲಿ ಕೈಗೊಂಡಿರುವ ಜೀವನೋಪಾಯ‌ ಚಟುವಟಿಕೆಗಳು, ಯಶಸ್ವೀ ಉದ್ದಿಮೆದಾರರು ಹಾಗೂ ಕೈಗೊಳ್ಳಬಹುದಾದ ವಿನೂತನ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿ ಮುಖ್ಯ ಪುಸ್ತಕ ಬರಹಗಾರರು ಮಂಡಿಸಿದರು.
ನಂತರದಲ್ಲಿ ಮುಖ್ಯ ಪುಸ್ತಕ‌ಬರಹಗಾರರ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here