


ಪುಂಜಾಲಕಟ್ಟೆ : ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುದಾನದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರಾಥಮಿಕ, ಫ್ರೌಡ, ಪದವಿ ಪೂರ್ವ ಕಾಲೇಜು ಗೆ ರೂ.2ಕೋಟಿ ಅನುದಾನ ದಲ್ಲಿ ನಿರ್ಮಾಣ ಗೊಂಡ ನೂತನ ಕಟ್ಟಡ ಉದ್ಘಾಟನೆ ಮಾ.28ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಪ್ರಭ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್. ವಿರೂಪಾಕ್ಷಪ್ಪ, ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ,. ಡಿ ಡಿ ಪಿಐ ದಯಾನಂದ ನಾಯಕ್, ಮುಖ್ಯ ಅಭಿಯಂತರ ಗುರುಪ್ರಸಾದ್, ಗುತ್ತಿಗೆದಾರ ಜೋಸೆಫ್, ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲೆ ಡಾ. ಸರೋಜಿನಿ ಆಚಾರ್, ಉಪ ಪ್ರಾಂಶುಪಾಲರಾದ ಉದಯ ಕುಮಾರ್ ಬಿ., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಶೆಟ್ಟಿ, ಶಾಲಾ ಸಿವಿಲ್ ಅಧ್ಯಕ್ಷ ದಿವಾಕರ ಶೆಟ್ಟಿ, ಪಾರೆಂಕಿ ದೇವಾಸ್ಥಾನದ ಪ್ರಧಾನ ಅರ್ಚಕ ಶ್ರೀಧರ ರಾವ್, ಕಾಂತಪ್ಪ ಗೌಡ, ಪದ್ಮನಾಭ ಸಾಲಿಯಾನ್ ಕೊಂಕಡ್ಡ, ಮಾಜಿ ಗ್ರಾ.ಪಂ. ಸದಸ್ಯ ದಯಾನಂದ ನಾಯಕ್ , ಮಾಲಾಡಿ ಗ್ರಾ. ಪಂ. ಸದಸ್ಯ ಪುನೀತ್ ಕುಮಾರ್, ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಕುಮಾರ್, ಕಿಶೋರ್ ಶೆಟ್ಟಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು,ಉಪಸ್ಥಿರಿದ್ದರು. ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
