ಗೇರುಕಟ್ಟೆ : ಇಲ್ಲಿಯ ಜನತಾ ಕಾಲೋನಿಯಲ್ಲಿ ವಾರದಿಂದ ನೀರಿನ ಸಮಸ್ಯೆಯು ಎದುರಾಗಿದೆ ಎಂದು ಸ್ಥಳೀಯ ನಾಗರಿಕರು ಕಳಿಯ ಗ್ರಾಮದ ಪಂಚಾಯತ್ ಎದುರು ಫೆ.20 ರಂದು ಪ್ರತಿಭಟನೆ ನಡೆಯಿತು.
ಕಳಿಯ ಗ್ರಾಮದ ಜನತಾ ಕಾಲೋನಿಯಲ್ಲಿ ಸುಮಾರು 60 ಕ್ಕೂ ಹೆಚ್ಚಿನ ಮನೆಗಳಿಗೆ ನೀರಿನ ಸಮಸ್ಯೆಯನ್ನು ಈ ಹಿಂದೆ ಪಂಚಾಯತ್ ಸದಸ್ಯರಲ್ಲಿ ಸಿಬ್ಬಂದಿಗಳ ಗಮನಕ್ಕೆ ತಂದರು. ಅದರೆ ನೀರಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಯಿತು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಕಠಿಣ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಈ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
ಪಂಚಾಯತ್ ಸದಸ್ಯರ ಮನವಿಗೆ ಪ್ರತಿಭಟನಾಕಾರರು ಒಪ್ಪಲಿಲ್ಲ.
ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು. ಹಾಗೂ ರಾತ್ರಿಯ ತನಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಮನವಿಯನ್ನು ಸ್ವೀಕರಿಸಿದ ಅಭಿವೃದ್ಧಿ ಅಧಿಕಾರಿ ಮಾತನಾಡುತ್ತಾ ಕಳೆದ 10 ದಿನಗಳಿಂದ ವಿದ್ಯುತ್ ಪೂರೈಕೆ ಯಲ್ಲಿ ಅಡಚಣೆ ಉಂಟಾಗಿದೆ. ಹಾಗೂ ನೀರು ಸರಬರಾಜು ಮಾಡಲು ಸಮಸ್ಯೆ ಯಾಗಿದೆ ಎಂದು ಹೇಳಿದರು. ಅದುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗೇರುಕಟ್ಟೆ ಜನತಾ ಕಾಲೋನಿ ನೀರಿನ ಸಮಸ್ಯೆ, ಗ್ರಾಮಸ್ಥರಿಂದ ಪ್ರತಿಭಟನೆ
p>