ಅರಸಿನಮಕ್ಕಿ: ನೂತನ ಧ್ವಜಸ್ತಂಭ ಉದ್ಘಾಟನೆ

0

ಅರಸಿನಮಕ್ಕಿ : ಅರಸಿನಮಕ್ಕಿ ನವಶಕ್ತಿ ರಿಕ್ಷಾ ಚಾಲಕ -ಮಾಲಕರ ಆಶ್ರಯದಲ್ಲಿ ಅರಸಿನಮಕ್ಕಿ ಪೇಟೆ ಯಲ್ಲಿ ನಿರ್ಮಿಸಲಾದ ನೂತನ ಧ್ವಜಸ್ತಂಭ ಉದ್ಘಾಟನೆಯನ್ನು ಶಾಸಕರಾದ ಹರೀಶ್ ಪೂಂಜ ಫೆ. 22ರಂದು ನೆರವೇರಿಸಿದರು.


ಈ ಸಂದರ್ಭದಲ್ಲಿ ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಧ್ವಜ ಕಟ್ಟೆಯ ಪ್ರಯೋಜಕರಾದ ಅರಸಿನಮಕ್ಕಿ ಗ್ರಾ.ಪಂ.ಸದಸ್ಯ ಸುಧೀರ್ ಕುಮಾರ್, ಶಿಬಾಜೆ ಗ್ರಾ.ಪಂ. ಅಧ್ಯಕ್ಷ ರತೀಶ್ ಗೌಡ, ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷ ನವೀನ್ ರೆಖ್ಯಾ, ಗ್ರಾ.ಪಂ ಸದಸ್ಯರು, ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು., ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪರಮೇಶ್ವರ್ ವಂದಿಸಿದರು.

LEAVE A REPLY

Please enter your comment!
Please enter your name here